ಆರೋಗ್ಯ ಜಾಗೃತಿ ಕಾರ್ಯಕ್ರಮ
ಕಂಪ್ಲಿ :
ಕಂಪ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಆದೇಶದ ಮೇರೆಗೆ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಗಂಡಾಂತರ ಗರ್ಭಿಣಿಯರನ್ನು ಒಳಗೊಂಡಂತೆ ಎಲ್ಲಾ ಗರ್ಭಿಣಿಯರಿಗೆ ಹಾಗೂ ತಾಯಂದಿರಿಗೆ ಮಕ್ಕಳಿಗೆ ಗರ್ಭಿಣಿಯರ ಆರೋಗ್ಯ ಸುರಕ್ಷತೆ ಮತ್ತು ಮಕ್ಕಳ ಕಾಳಜಿ ಬಿಸಿಲಿನ ಪ್ರಖರತೆ ಹಿನ್ನೆಲೆಯಲ್ಲಿ ವಹಿಸಬಹುದಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಹಾಗೂ ಮಕ್ಕಳ ಮೇಲೆ ಅತಿಯಾದ ಶಾಖದ ಪರಿಣಾಮಗಳ ಬಗ್ಗೆ ಪ್ರಥಮ ಚಿಕಿತ್ಸಾ ವಿಧಾನಗಳ ಬಗ್ಗೆ ಹಾಗೂ ಸಾರ್ವತ್ರಿಕ ಲಸಿಕ ಕಾರ್ಯಕ್ರಮದ ಮಹತ್ವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಡಾಕ್ಟರ್ ವೀರೇಶ್ ಸರ್ ರವರು ಜಾಗೃತಿಯನ್ನು ಮೂಡಿಸಿದರು.
ಇದೇ ವೇಳೆ ಡಾಕ್ಟರ್ ಮಲ್ಲೇಶಪ್ಪ ಅವರು ನಿರ್ಜಲೀಕರಣದ ಬಗ್ಗೆ ಹಾಗೂ ಬಿಟ್ಟು ಟಪುನರ್ಜಲೀಕರಣಗೊಳಿಸಲು ಓ.ಆರ್ .ಎಸ್ ತಯಾರಿಕೆ ಬಗ್ಗೆ ಅರಿವು ಮೂಡಿಸಿದರು .
ಈ ಸಂದರ್ಭದಲ್ಲಿ ಡಾಕ್ಟರ್. ಉಷಾ, ಕೆ ಶೋಭಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು. ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಶುಶ್ರೂಷಣ ಅಧಿಕಾರಿಗಳು ತಾಯಂದರು ಹಾಗೂ ಮಕ್ಕಳು ಸೇರಿದಂತೆ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.