Kurugodu : ಕನ್ನಡದಲ್ಲೇ UPSC ಪರೀಕ್ಷೆ ಬರೆದು ಆಯ್ಕೆಯಾದ ಶಾಂತಪ್ಪ


ಕನ್ನಡದಲ್ಲೇ UPSC ಪರೀಕ್ಷೆ ಬರೆದು ಆಯ್ಕೆಯಾದ ಶಾಂತಪ್ಪ

ಕುರುಗೋಡು : 

2023 ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರೀಕ ಸೇವಾ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಪರೀಕ್ಷೆಗಳಲ್ಲಿ ಕರ್ನಾಟಕದ 15 ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗುವ ಮೂಲಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಪಿಎಸ್​ಐ ಕರ್ತವ್ಯ ನಿರ್ವಹಿಸುತ್ತಿರುವ ಶಾಂತಪ್ಪ ಜಡೆಮ್ಮನವರ್​ ಕನ್ನಡದಲ್ಲೇ ಯುಪಿಎಸ್ಸಿ ಪರೀಕ್ಷೆ ಬರೆದು  644ನೇ ರ್ಯಾಂಕ್​ ಪಡೆಯುವ ಮೂಲಕ ದೇಶದ ಅತ್ಯನ್ನತ ನಾಗರೀಕ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದಾರೆ.


ಶಾಂತಪ್ಪನವರ ಪರಿಚಯ

ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಹೊಸ ಗೆಣಿಕೆಹಾಳ್ ಗ್ರಾಮದ ನಿವಾಸಿಗಳಾದ   ಶಿವಕುಮಾರ್,ಮತ್ತು  ಜಡೆಮ್ಮನವರ  ಏಕೈಕ ಪುತ್ರನೇ ಶಾಂತಪ್ಪ.

 ಹುಟ್ಟಿದ 2ನೇ ವರ್ಷದೊಳಗೆ ತಂದೆಯನ್ನು ಕಳೆದುಕೊಂಡರು.ತಾಯಿಯ ಆರೈಕೆಯಲ್ಲಿ ಬೆಳೆದರು. ಇವರಿಗೆ ಇದ್ದ ಸ್ವಲ್ಪ ಹೊಲದಲ್ಲಿ ಕೆಲಸ ಮಾಡುವ ಜೊತೆಗೆ ಕೂಲಿ ಮಾಡುತ್ತಿದ್ದರು. 

ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಹೊಸ ಗೆಣಿಕೆಹಾಳ್ ನಲ್ಲಿಯೇ ವಿದ್ಯಾಭ್ಯಾಸ ಮಾಡಿದರು. 6ನೇ ಮತ್ತು 10ನೇ ತರಗತಿ ಗೆಣಿಕೆಹಾಳ್ ಗ್ರಾಮದಲ್ಲೂ ಪೂರ್ಣಗೊಳಿಸಿದರು.

2006ರಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿ  ದ್ವಿತೀಯ ಪಿಯುಸಿ ವಿಜ್ಞಾನದಲ್ಲಿ  ಫೇಲ್ ಆಗಿದ್ದರು ಆ ನಂತರ ಮತ್ತೆ ಪರೀಕ್ಷೆ ಕಟ್ಟಿ ಕೇವಲ 46%ನಲ್ಲಿ ಪಾಸಾಗಿದ್ದರು.

ಮುಂದೆ ಪದವಿಯಲ್ಲಿ ಚೆನ್ನಾಗಿ ವಿದ್ಯಾಭ್ಯಾಸ ಮಾಡುವ ಮೂಲಕ‌ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ  ಪಡೆದರು.

ಸರ್ಕಾರದ ಧನ ಸಹಾಯದಿಂದ ದಿಲ್ಲಿಯಲ್ಲಿ ಕೋಚಿಂಗ್ ಪಡೆದರು.ನಂತರ ಮನೆಯಲ್ಲಿಯೇ   ಸ್ವತಃ ಅಭ್ಯಾಸ ಮಾಡಿದರು.

ಯು.ಪಿ ಎಸ್.ಸಿ  4 ಬಾರಿ ಅನುತೀರ್ಣರಾದರು.

2 ಬಾರಿ ಇಂಟರ್ ವ್ಯೂ ವರೆಗೆ ಹೋಗಿ ಬಂದರು.

2017 ರಲ್ಲಿ ಪಿ.ಎಸ್.ಐ ಆಗಿ ನೇಮಕವಾದರು.

ಶಾಂತಪ್ಪ ಈವರೆಗೂ ಸುಮಾರು ಐದಾರು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಅವರಿಗೆ ಮೊದಲು ಸಿಕ್ಕಿದ್ದು ಕೆನರಾ ಬ್ಯಾಂಕ್‌ನಲ್ಲಿ ಕೆಲಸ. ಆದರೆ, ಬ್ಯಾಂಕ್ ಉದ್ಯೋಗ ಇಷ್ಟವಿಲ್ಲದಿದ್ದರಿಂದ ಆ ಕೆಲಸಕ್ಕೆ ಹೋಗಲಿಲ್ಲ.

ಟಾಯ್ಲೆಟ್ ಕಟ್ಟಿ ಹೀರೋ ಆಗಿದ್ದರು

ಗೊರಗುಂಟೆ ಪಾಳ್ಯದಲ್ಲಿ ಶೌಚಾಲಯವಿಲ್ಲದೇ ಪರದಾಡುತ್ತಿದ್ದ ಜನರನ್ನು ನೋಡಿ "ಟಾಯ್ಲೆಟ್ ಕಟ್ಟುವ'' ಕ್ಯಾಂಪೇನ್ ಗೆ ಚಾಲನೆ ಕೊಟ್ಟು ಕೊನೆಗೆ ಅವರೇ ನೂರನೇ ದಿನಕ್ಕೆ ಮೊಬೈಲ್ ಟಾಯ್ಲೆಟ್ ಕಟ್ಟಿಕೊಟ್ಟು ಹೀರೋ ಆಗಿದ್ದರು.ಶಾಂತಪ್ಪ ಕುರುಬರ್ ಅವರು ಪೊಲೀಸ್‌ ಆಗಿ ಕೆಲಸ ನಿರ್ವಹಿಸುತ್ತಲೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಬೆಂಗಳೂರಿನ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕರಿಗಾಗಿ 10 ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ ಮಾಡಿದ್ದಾರೆ. ಇವರು ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ ಮಾಡಲು ಕಾರಣ ಅವರ ತಾಯಿ. ಈ ಮಾರ್ಗದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ತಾಯಿ ಶೌಚಾಲಯಕ್ಕೆ ಹೋಗಬೇಕು ಎಂದಿದ್ದರು. ಆಗ ಹತ್ತಿರದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಶೌಚಕ್ಕೆ ಹೋಗಲು ತೊಂದರೆಯಾಗಿತ್ತು. ಇದರಿಂದ ತಮ್ಮ ತಾಯಿಗಾದ ಕಷ್ಟ ಯಾರಿಗೂ ಆಗಬಾರದು ಎಂದು ಸಾರ್ವಜನಿಕರಿಗೆ ನೆರವಾಗಲು ಮೊಬೈಲ್‌ ಟಾಯ್ಲೆಟ್‌ಗಳ ವ್ಯವಸ್ಥೆ ಮಾಡಿದ್ದಾರೆ.

ವಲಸೆ ಕಾರ್ಮಿಕರ ಮಕ್ಕಳಿಗೆ ಪಾಠಮಾಡೋ ಮೇಷ್ಟ್ರು

ಪಿಎಸ್ಐ ಆಗಿ ಠಾಣೆ ಕರ್ತವ್ಯ ಮುಗಿಸಿದ ಬಳಿಕ ಬಿಡುವಿನ ವೇಳೆಯಲ್ಲಿ ವಲಸೆ ಕಾರ್ಮಿಕ ಮಕ್ಕಳಿಗೆ ಉಚಿತ ಪಾಠ ಮಾಡುತ್ತಿದ್ದಾರೆ. ಈ ಮೂಲಕ ದೊಡ್ಡ ಸುದ್ದಿಯಾಗಿದ್ದರು. ವಲಸೆ ಕಾರ್ಮಿಕರ ಕಷ್ಟಗಳನ್ನು ಹತ್ತಿರದಿಂದ ನೋಡಿ ಅನುಭವಿಸಿದ್ದೇನೆ. ವಲಸೆ ಕಾರ್ಮಿಕರ ಮಕ್ಕಳು ವಲಸೆ ಕಾರ್ಮಿಕರು ಆಗಬಾರದು ಎನ್ನುವುದು ನನ್ನ ಭಾವನೆ. ಕೆಲಸ ಮಾಡುವ ಜಾಗದಲ್ಲಿ ವಲಸೆ ಮಕ್ಕಳನ್ನು ನೋಡಿದ್ರೆ ನನ್ನಲ್ಲಿನ ಅಂತಃಕರಣ ಉಕ್ಕುತ್ತೆ. ಹೀಗಾಗಿ ಅವರಿಗೆ ಬಿಡುವಿನ ವೇಳೆಯಲ್ಲಿ ನಾನು ಪಾಠ ಮಾಡುತ್ತಿದ್ದೇನೆ ಎನ್ನುವ ಶಾಂತಪ್ಪನವರ ಮಾತುಗಳು ಇತರರಿಗೆ ಸ್ಪೂರ್ತಿ ನೀಡುತ್ತದೆ. 

 ಇನ್ನೂ ಸರ್ಕಾರಿ ಸೇವೆಗೆ ಸೇರಲು ಆಸೆ ಪಡುವರಿಗೂ ಮಾರ್ಗದರ್ಶನ ನೀಡಿ ಸಹಾಯ ಮಾಡುತ್ತಿದ್ದಾರೆ.

ಇನ್ನೂ ಇವರ ಸಾಧನೆಗೆ ಇವರ ಹಿತೈಷಿಗಳು, ಸಹೋದರರು, ಸಂಭಂಧಿಗಳು,ಸ್ನೇಹಿತರು ಸೇರಿದಂತೆ ಹೊಸ ಗೆಣಿಕೆಹಾಳ್ ಗ್ರಾಮದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">