Modi: ಮಹಾನ್ ವ್ಯಕ್ತಿ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ-ಶಾಸಕ ಚಂದ್ರು ಲಮಾಣಿ


ಭಾರತ ದೇಶವನ್ನು ಸುಭದ್ರ ಗೊಳಿಸಲು ನರೇಂದ್ರ ಮೋದಿ ಅವರನ್ನು ಮತ್ತೆ ಆರಿಸಿ ತರೋಣ  ಎಂದ : ಶಾಸಕ ಡಾಕ್ಟರ್ ಚಂದ್ರು ಲಮಾಣಿ 

ಭಾರತ ಮಾತೆ ಪುತ್ರ ಹೆಮ್ಮೆಯ ನಾಯಕರಾದ  ನರೇಂದ್ರ ಮೋದಿ ಮಹಾನ್ ವ್ಯಕ್ತಿ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ ಸಾಮಾನ್ಯ ಕಾರ್ಯಕರ್ತರನ್ನಾಗಿದ ಶಾಸಕನಾಗಿ ಮಾಡಿದ್ದು ಭಾರತೀಯ ಜನತಾ ಪಾರ್ಟಿ ಕಟ್ಟಕಡೆಯ ವ್ಯಕ್ತಿಗೂ ಉನ್ನತ ಹುದ್ದೆ ನೀಡಿದ್ದು ಏಕೈಕ ಪಕ್ಷ ಎಂದರೆ ಬಿಜೆಪಿ ಪಕ್ಷವಾಗಿದೆ. ನಮ್ಮ ಭಾರತ ದೇಶವನ್ನು ಇನ್ನೂ ಸುಭದ್ರ ಗೊಳಿಸಲು ನರೇಂದ್ರ ಮೋದಿಯವರು  ಮತ್ತೆ ಪ್ರಧಾನಿಯಾಗಿಸಲು ಕೈ ಬಲಪಡಿಸಲು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಲು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೆಲಸ ಮಾಡಿ ಅವರನ್ನು ಕೇಂದ್ರದ ಮಂತ್ರಿಯನ್ನಾಗಿಸಲು ಶ್ರಮಿಸೋಣ ಎಂದು ಶಾಸಕ ಡಾಕ್ಟರ್ ಚಂದ್ರು ಲಮಾಣಿ ಹೇಳಿದರು.

 ಪಟ್ಟಣದ ವಿವಿಧ ಮೋರ್ಚಾ ಪದಾಧಿಕಾರಿಗಳ ಆಯ್ಕೆ ಹಾಗೂ ಆದೇಶ ಪ್ರತಿ ವಿತರಣಾ ಕಾರ್ಯಕ್ರಮ ಪ್ರತಿ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ವಿಧಾನ ಪರಿಷತ್ ಸದಸ್ಯ ಎಸ್ ವಿ ಶಂಕರ್ ಅವರು ಮಾತನಾಡಿ. ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಬೂತ್ ಮಟ್ಟದಲ್ಲಿ ಕಠಿಣಶ್ರಮ ಪರಿಶ್ರಮದಿಂದ ಪಕ್ಷ ಸಂಘಟಿಸಬೇಕು.ಮತದಾರರಲ್ಲಿ ದೇಶದ ಭವಿಷ್ಯ ನಿರ್ಮಾಣ ಮಾಡಲು ಮೋದಿಯವರಿಗೆ ಮತ ನೀಡುವಂತೆ ಮನವಿ ಮಾಡಿದರು. ದೇಶದ ಅಭಿವೃದ್ಧಿಗಾಗಿ ಆರ್ಥಿಕ ಬೆಳವಣಿಗೆಗಾಗಿ. ಜನರ ಹಿತಕ್ಕಾಗಿ. ವಿಶ್ವಗುರು ದೇಶವನ್ನಾಗಿಸಲು ಮತದಾರರು ಈ ಬಾರಿ ಬಿಜೆಪಿಗೆ ಮತನೀಡಿ ಮೋದಿಯವರಿಗೆ ಕೈ ಬಲಪಡಿಸಬೇಕು ಎಂದರು.

 ರಾಜ್ಯ ಎಸ್ ಸಿ  ಮೋರ್ಚಾ ಉಪಾಧ್ಯಕ್ಷರಾಗಿ ಅಧ್ಯಕ್ಷ ಆಯ್ಕೆಯಾದ  ಶಾಸಕ ಡಾಕ್ಟರ್ ಚಂದ್ರ ಲಮಾಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ನಗರ ಘಟಕ ಅಧ್ಯಕ್ಷ ನಾಗರಾಜ್ ಲಕ್ಕುಂಡಿ ವಹಿಸಿದ್ದರು. ಕಾರ್ಯಕ್ರಮವನ್ನು ಬಸವರಾಜ ಒಡವಿ ನಿರೂಪಿಸಿದರು.

ನಗರ ಘಟಕ ಅಧ್ಯಕ್ಷ ಸುಧೀರ್ ಜಮಖಂಡಿ ಮಂಜುನಾಥ ಸೊಂಟೂರು  ಸುರೇಶ ಅವಳಾದ್ ಅನ್ನಪೂರ್ಣ ಕತೆಕಾರ್, ಅನಿಲ್ ಪಾಚೆಪುರ್, ಸಂತೋಷ್ ತೊಡೆಕಾರಕ್, ಮಲ್ಲು ಕುದುರಿ, ರಾಜು ಮಾತಾಡೆ, ವಿಜಯ ಲಕ್ಷ್ಮಿ ತಳವಾರ್, ಮಹೇಶ್ ಕಲ್ಲಪ್ಪನವರ್, ಇನ್ನೂ ಅನೇಕರನ್ನು ಆಯ್ಕೆ ಮಾಡಲಾಗಿತ್ತು.

 ಮಾಜಿ ತಾಲೂಕ್ ಪಂಚಾಯತ್ ಅಧ್ಯಕ್ಷ ಜಾನು ಲಮಾಣಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಫಕೀರೇಶ ರಟ್ಟಿಹಳ್ಳಿ, ಬಿ ಡಿ ಪಲ್ಯದ, ಮಹಿಳಾ ಮಂಡಳ ಅಧ್ಯಕ್ಷ ನಂದ ಪಲ್ಲೆದ್,  ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕ್ಬರ್ ಸಾಬ್ ಯಾದಗಿರಿ, ಎಲ್ಲಪ್ಪ ಇಂಗಳಗಿ, ಸೇರಿದಂತೆ ಅನೇಕ ಕಾರ್ಯಕರ್ತರು ಭಾಗಿಯಾಗಿದ್ದರು.


ವರದಿ: ವೀರೇಶ್ ಗುಗ್ಗರಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">