Shirahatti : ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ


ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಜರುಗಿತು.


 ಶಿರಹಟ್ಟಿ :ನಗರದ ಶಾಸಕ ಚಂದ್ರು ಲಮಾಣಿ ಅವರ ಸ್ವಗೃಹದಲ್ಲಿ ಭಾರತೀಯ ಜನತಾ ಪಕ್ಷದ ನಗರ ಘಟಕದ ಆಶ್ರಯದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಜರಗಿತು. 

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ. ಜಗತ್ತಿನ ಅತಿ ಹೆಚ್ಚು ಕಾರ್ಯಕರ್ತ ಹೊಂದಿರುವ ಪಕ್ಷ ನಮ್ಮ ಬಿಜೆಪಿ ಪಕ್ಷವಾಗಿದ್ದು, ಅನೇಕ ತ್ಯಾಗ ಬಲಿದಾನ ರಾಷ್ಟ್ರೀಯ ಸೇವಾ ಮನೋಭಾವನೆಯಿಂದ ಬಿಜೆಪಿ ಪಕ್ಷ ಸ್ಥಾಪನೆಯಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬರುವ ದಿನಮಾನದಲ್ಲಿ ದೇಶ ವಿಶ್ವಗುರು ಆಗಲು ಬಿಜೆಪಿ ಪಕ್ಷ ಕಾರಣವಾಗಲಿದೆ ಎಂದು ಹೇಳಿದರು. 

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಫಕೀರೇಶ ರಟ್ಟಿಹಳ್ಳಿ, ಶಿರಹಟ್ಟಿ ವಿಧಾನಸಭ ಲೋಕಸಭಾ ಚುನಾವಣೆಯ ಸಂಚಾಲಕ ಬಸವರಾಜ ಪಲ್ಲೇದ ಮಾತನಾಡಿ, ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದು ಸಾಮಾನ್ಯ ವ್ಯಕ್ತಿಯನ್ನ ಉನ್ನತ ಹುದ್ದೆಯನ್ನು ನೀಡುವಲ್ಲಿ ಬಿಜೆಪಿ ಪಕ್ಷ ಯಾವತ್ತೂ ಮುಂದೆ ಇರುತ್ತದೆ. ರಾಷ್ಟ್ರವಾದಿ ಮನೋಭಾವ ಹೊಂದಿರುವ ಬಿಜೆಪಿಯ ತತ್ವ ಸಿದ್ಧಾಂತಗಳಿಂದ ಇಂದು ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿದರು. ಬಸವರಾಜು ಒಡವಿ ಕಾರ್ಯಕ್ರಮ ನಿರೂಪಣೆ ಮಾಡಿದರು.


ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸಂದೀಪ ಕಪ್ಪತ್ತನವರ, ಮಹಿಳಾ ಮಂಡಳ ಅಧ್ಯಕ್ಷೆ ನಂದಾ ಪಲ್ಲೆದ, ಅಲ್ಪಸಂಖ್ಯಾತ ಅಧ್ಯಕ್ಷ ಅಕ್ಬರಸಾಬ ಯಾದಗಿರಿ, ನಗರ ಮಹಿಳಾ ಘಟಕದ ಅಧ್ಯಕ್ಷ ರೂಪ ಪಾಶ್ಚಾಪುರ, ಯಲ್ಲಪ್ಪ ಇಂಗಳಗಿ, ರಾಜು ಕಪ್ಪತ್ನವರ, ಪರಶು ಡೊಂಕು ಬಳ್ಳಿ, ಮುತ್ತಣ್ಣ ಕಲಾದಗಿ, ವೀರಣ್ಣ ಅಂಗಡಿ, ಅಶೋಕ್ ವರವಿ ಸೇರಿದಂತೆ ಅನೇಕರಿದ್ದರು ಭಾಗಿಯಾಗಿದ್ದರು.

 ವರದಿ: ವೀರೇಶ್ ಗುಗ್ಗರಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">