ಯಾದಗಿರಿ : ಎದ್ದೇಳು ಕರ್ನಾಟಕದಿಂದ ರಾಜ್ಯ ವ್ಯಾಪಿ ಯಾಗಿ "ದೇಶ ಉಳಿಸಿ" ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದರ ಭಾಗವಾಗಿ ಇಂದು ಯಾದಗಿರಿ ಜಿಲ್ಲೆಯಲ್ಲಿ ಆಗಮಿಸಿ ನಗರದ ಪತ್ರಿಕಾ ಗೋಷ್ಟಿ ಸಂಕಲ್ಪ ಯಾತ್ರೆಯ ಉದ್ದೇಶವನ್ನು ತಿಳಿಸಿದರು.
ಈ ಕುರಿತು ಹಿರಿಯ ಹೋರಾಟಗಾರ ರಮೇಶ್ ಸಂಕ್ರಾಂತಿ ಮಾತನಾಡಿ ಬರುವ ಲೋಕಸಭಾ ಚುನಾವ ಣೆಯಲ್ಲಿ ಕುತಂತ್ರಿ ಕೋಮುವಾದಿ ಮೋದಿ ಸರ್ಕಾರ ವನ್ನು ಕಿತ್ತೊಗೆಯಬೇಕಾಗಿದೆ ಅಂಬೇಡ್ಕರ್ ಸಂವಿಧಾನ, ರೈತರನ್ನ, ಕಾರ್ಮಿಕರನ್ನ, ಮೀಸಲಾತಿ ಪಡೆಯುತ್ತಿರುವ ಶೋಷಿತ ಸಮುದಾಯಗಳನ್ನ ರಕ್ಷಣೆ ಮಾಡಬೇಕಾಗಿದೆ. ಅಜಾಗುರುಕತೆಯಿಂದ ಆಡಳಿತ ಮಾಡುವ ಭ್ರಷ್ಟ ಮೋದಿ ಯಂತ ಒಕ್ಕೂಟವನ್ನು ಸೋಲಿಸಬೇಕಾಗಿದೆ. ನಿಜವಾದ ಪ್ರಾಮಾಣಿಕವಾಗಿ ಈ ದೇಶವನ್ನು ಪ್ರೀತಿ ಮಾಡುವಂತ ವ್ಯಕ್ತಿಗಳನ್ನು ಗೆಲ್ಲಿಸಬೇಕಾಗಿದೆ, ಶಾಂತಿ ಬಂಗಮಡುವ ಸಂವಿಧಾನ ವಿರುದ್ಧ ಹೇಳಿಕೆಕೊಡುವಂತವರ ವಿರುದ್ಧ ಮತ ಚಲಾಯಿಸಬೇಕಿದೆ. ನಮ್ಮ ದೇಶ ಸೌಹಾರ್ದತೆ, ಸಹ ಬಾಳ್ವೆ, ಸ್ನೇಹ ಮತ್ತು ತಾಳ್ಮೆ ಉಳಿಸುವಂತ ಇಂಡಿಯಾ ಒಕ್ಕೂಟ ಗೆಲ್ಲಿಸಬೇಕಿದೆ ಎನ್‌ಡಿಎ ಒಕ್ಕೂಟವನ್ನು
ಸೋಲಿಸಬೇಕಿದೆ ಇಡೀ ಜಿಲ್ಲೆಯ ಮತದಾರರು ಕೋಮು ವಾದಿಗಳನ್ನು ಸೋಲಿಸಿ, ಸಂವಿಧಾನ ಉಳಿಸಿ ಎಂದು ನಾಗರಿಕರಲ್ಲಿ ಮನವಿ ಮಾಡಿಕೊಂಡರು.
ಏಪ್ರಿಲ್ 1 ರಿಂದ 8 ರವರೆಗೆ ಮೂರು ಮಾರ್ಗಗಳಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ದೇಶ ಉಳಿಸಿ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯಲ್ಲಿ ಏಪ್ರಿಲ್ 8. ರ ಸೋಮವಾರ ಮದ್ಯಾಹ್ನ 3ಗಂಟೆಗೆ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಎಂ ಆರ್ ಭೇರಿ ಎದ್ದೇಳು ಕರ್ನಾಟಕ ರಾಜ್ಯ ಸಂಚಾಲಕರು, ನಗನೂರು ಭೀಮಣ್ಣ ದಲಿತ ಮುಖಂಡರು ರಾಯಚೂರು, ಶರಣು ಕೊಪ್ಪಳ ಮತ್ತು ಗಂಗಾವತಿ ತಾಲೂಕಿನ ಸಂಚಾಲಕರು, ಮರೆಪ್ಪ ಚಟ್ಟೇರಕರ್ ಜಿಲ್ಲಾ ಸಂಚಾಲಕರು ಎದ್ದೇಳು ಕರ್ನಾಟಕ ಡಿಎಸ್ಎಸ್ ಯಾದಗಿರಿ ಜಿಲ್ಲೆ, ಗುಲಮ ಮಹಿಬೂಬ ಖಯ್ಯಾತ ಜಮಾತ ಇಸ್ಲಾಂ ಹಿಂದ ಜಿಲ್ಲಾ ಸಂಚಾಲಕರು ಯಾದಗಿರಿ,
ಎಮ್ ಡಿ ಸಲೀಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಬತಾ ಮಿಲ್ಲತಾ ಕಮಿಟಿ ಯಾದಗಿರಿ, ಗೋಪಾಲ ತಳಿಗೇರಿ,ಸೈದಪ್ಪ ಕೂಲ್ಲೂರು , ಕಾಶಿನಾಥ ನಾಟೇಕರ್, ಸುರೇಶ್ ಬೀರನಾಳ, ಗಿರೀಶ್ ಕುಮಾರ ಚಟ್ಟೇರಕರ್ ಇತರರಿದ್ದರು ಭಾಗವಹಿಸಿದ್ದರು.
ವರದಿ : ರಾಹುಲ್ ಕೊಲ್ಲೂರಕರ್ , ಯಾದಗಿರಿ.