ಕಂಪ್ಲಿ :
ಗುಡುಗು ಮಿಂಚು ಸಹಿತ ಮಳೆ
ಕಂಪ್ಲಿ ತಾಲೂಕಿನ ಹಲವು ಗ್ರಾಮಗಳಲ್ಲಿ ಸಿಡಿಲು ಸಹಿತ ಮಳೆಯಾಗಿದೆ.
ತಡರಾತ್ರಿ ಸುಮಾರು 12 ಗಂಟೆಯಿಂದ ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ಕಂಪ್ಲಿ ನಗರದ ಕೆಲ ರಸ್ತೆಗಳು ಹಳ್ಳದಂತೆ ನೀರು ತುಂಬಿವೆ.
ಕಳೆದ ವಾರದಿಂದಲೂ ಬಿರುಸಿನ ಗಾಳಿ ಕಂಡುಬಂದಿತ್ತು, ಬಿರುಸಿನ ಗಾಳಿಯಿಂದಾಗಿ ಮಳೆ ಬಾರದೇ, ಜೋರಾದ ಗಾಳಿ ಬೀಸಿತ್ತು. ಆದರೇ ಇಂದು ಗುಡುಗು, ಸಿಡಿಲು, ಮತ್ತು ಮಳೆಯಿಂದ ಜನ ಆತಂಕದಲ್ಲಿದ್ದರು.
ಕಂಪ್ಲಿ ನಗರದ ಹಲವೆಡೆ ಟವರ್ ಗಳಿಗೆ, ಎತ್ತರದ ಕಟ್ಟಡ ಹಾಗೂ ಮರಗಳಿಗೆ ಸಿಡಿಲು ಬಡಿದಿದೆ.
ಕೂಡಲೇ, ಕೆಇಬಿ ಅಧಿಕಾರಿಗಳು ವಿದ್ಯುತ್ ಸ್ಥಗಿತಗೊಳಿಸಿದ್ದಾರೆ.