ಪಟ್ಟಣದಲ್ಲಿ ಶನಿವಾರ ರಾಷ್ಟೀಯ ಮಕ್ಕಳ ಹಕ್ಕುಗಳ ಆಯೋಗದ ಪಾನ್ ಇಂಡಿಯಾ ಮಕ್ಕಳ ರಕ್ಷಣಾ ಮತ್ತು ಪುನರ್ ವಸತಿ ಆಂದೋಲನ ಅಂಗವಾಗಿ ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಶಿವರಾಜ್ ಶಿವಪುರ ಅವರ ನೇತೃತ್ವದಲ್ಲಿ ವಿವಿಧ ಉದ್ಯಮಗಳ ಮೇಲೆ ಅಂಗಡಿಗಳ ಮೇಲೆ ದಾಳಿ ನಡೆಸಿ 4 ಜನ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಯಿತು.
ಪಟ್ಟಣದ ಬಟ್ಟೆ ಅಂಗಡಿಗಳು, ಹೋಟೆಲ್, ಗ್ಯಾರೇಜ್, ಬೇಕರಿ, ಕಿರಾಣಿ ಅಂಗಡಿಗಳು ಹಾಗೂ ಸಮೀಪದ ಇಟ್ಟಿಗೆ ಬಟ್ಟಿಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ 4 ಬಾಲ ಕಾರ್ಮಿಕ ಮಕ್ಕಳು ರಕ್ಷಿಸಿ ಪೋಷಕರ ವಶಕ್ಕೆ ನೀಡಿದೆ. ಇನ್ನು ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಶಿವರಾಜ್, ತಾಲೂಕು ಪಂಚಾಯಿತಿ ಎಡಿ ಕೆ.ಎಸ್.ಮಲ್ಲನಗೌಡ, ಬಳ್ಳಾರಿಯ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಮೌನೇಶ್, ಕಾರ್ಮಿಕ ಇಲಾಖೆ ನಿರೀಕ್ಷಕ ಅಶೋಕ್, ಪಿಎಸ್ ಐ ಎನ್. ನಿಂಗಪ್ಪ, ಶಿಕ್ಷಣ ಸಂಯೋಜಕರಾದ ಟಿ.ಎಂ.ಬಸವರಾಜ್, ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ್, ಗಸ್ತು ಅರಣ್ಯ ಪಾಲಕ ರಾಘವೇಂದ್ರ, ಡಬ್ಲ್ಯೂ ಸಿಪಿ ಮೇಲ್ವಿಚಾರಕಿ ಉಷಾ, ಸಹಾಯಕ ಕೃಷಿ ಅಧಿಕಾರಿ ಜ್ಯೋತಿ, ಆಹಾರ ನಿರೀಕ್ಷಕರಾದ ವಿರೂಪಾಕ್ಷಪ್ಪ, ಜೋಳ ಖರೀದಿ ಕೇಂದ್ರದ ಉಗ್ರಣ ವ್ಯವಸ್ಥಾಪಕಿ ಬಿ.ವಿ.ಅನುಪಮ, ಆರೋಗ್ಯ ನಿರೀಕ್ಷಕಿ ಸ್ವಾತಿ, ಮತ್ತು ಇತರರು ಉಪಸ್ಥಿತರಿದ್ದರು.