ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾಗಿ ಮೋಹನ್ ದಾನಪ್ಪ ನೇಮಕ
ಜನ ಸಾಮಾನ್ಯರು ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದರೂ ಕೆಲವೊಮ್ಮೆ ಪೊಲೀಸ್ ಅಧಿಕಾರಿಗಳು ದುರ್ನಡತೆ ತೋರುವುದು, ತನಿಖೆ ನಡೆಸದಿರುವುದು, ಅವಾಚ್ಯ ಶಬ್ದಗಳಿಂದ ನಿಂದನೆ ಇತ್ಯಾದಿ ಕಿರುಕುಳ ನೀಡುತ್ತಾರೆ. ಇಂತಹ ಪೊಲೀಸರ ವಿರುದ್ಧ ದೂರು ನೀಡಲೆಂದಿರುವ “ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ"ದ ನಾಗರೀಕ ಸಮಾಜದ ರಾಜ್ಯ ಸದಸ್ಯರಾಗಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ ಮೋಹನ್ ಕುಮಾರ್ ದಾನಪ್ಪರವರನ್ನು ರಾಜ್ಯಪಾಲರ ಆದೇಶಾನುಸಾರ ನೇಮಕ ಮಾಡಿ, ಕರ್ನಾಟಕ ಸರ್ಕಾರದ ಗೃಹ ಇಲಾಖೆಯೂ ಅಧಿಕೃತ ಆದೇಶ ಹೊರಡಿಸಿದೆ.