ಸೋಮಪ್ಪನ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ
ಕಂಪ್ಲಿ : ಐತಿಹಾಸಿಕ ಸೋಮಪ್ಪನ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದರ ಬಗ್ಗೆ ನಿನ್ನೆ ವರದಿ ಮಾಡಿತ್ತು ಸಿದ್ದಿ ಟಿವಿ, ವರದಿಯ ಬೆನ್ನಲ್ಲೇ ಇಂದು ಸೋಮಪ್ಪನ ಕೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು,ಕಂಪ್ಲಿ ಪೋಲಿಸ್ ಇಲಾಖೆ ಸಿಬ್ಬಂದಿಗಳು, ಕಂಪ್ಲಿ ಪುರಸಭೆಯ ಸಿಬ್ಬಂದಿ ಹಾಗೂ ಮೀನುಗಾರ ಸಮಾಜದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೊಸಳೆ ಹಿಡಿಯುವ ಕಾರ್ಯಚರಣೆಯನ್ನು ನಾಳೆಗೆ ಮುಂದೂಡಿದ್ದಾರೆ.
ಸೋಮಪ್ಪನ ಕೆರೆಯಲ್ಲಿ ಮೊಸಳೆಯನ್ನು ನೋಡಲು ಕಂಪ್ಲಿಯ ಜನರು ಮುಗಿಬಿದ್ದರು, ಇನ್ನು ಕೆಲ ಯುವಕರು ಮೊಸಳೆ ಇರುವ ಜಾಗಕ್ಕೆ ಹೋಗಲು ಯತ್ನಿಸಿ ಪುಂಡಾಟ ಮೇರೆದರು.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ