Kampli : ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಜೆಸಿಐ ಕಂಪ್ಲಿ ಸೋನಾ


ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಜೆಸಿಐ ಕಂಪ್ಲಿ ಸೋನಾ

ಜೆಸಿಐ ಕಂಪ್ಲಿ ಸೋನಾ ಘಟಕವು ಅನೇಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜೆಸಿಐ ವಲಯ 24 ರಲ್ಲಿ ವಿಶೇಷ ಪುರಸ್ಕಾರಗಳನ್ನು ಪಡೆಯುವ ಮೂಲಕ ಅನೇಕ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಳ್ಳುವ ಜೊತೆಗೆ ಪ್ರಶಂಸೆಗೆ ಪಾತ್ರವಾಗಿದೆ. ಹೊಸಪೇಟೆಯ ಮಲ್ಲಿಗೆ ಹೋಟೆಲ್ ನಲ್ಲಿ ಈಚೆಗೆ ನಡೆದ ವಲಯ ಮಟ್ಟದ ಮಧ್ಯವಾರ್ಷಿಕ ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರು ಪ್ರಶಸ್ತಿಗಳನ್ನು ನೀಡಿ ಘಟಕದ ಪದಾಧಿಕಾರಿಗಳಿಗೆ ಬೆನ್ ತಟ್ಟಿದ್ದಾರೆ. ರಕ್ತದಾನ ಶಿಬಿರಕ್ಕೆ ವಿಶೇಷ ಪುರಸ್ಕಾರ, ವಲಯ ಮಟ್ಟದ ಅತ್ಯುತ್ತಮ ಕಾರ್ಯಕ್ರಮದಲ್ಲಿ ದ್ವಿತೀಯ ಬಹುಮಾನ, ವಲಯ ಮಟ್ಟದ ವಿಶೇಷ ಪುರಸ್ಕಾರ, ಮಹಿಳಾ ವಿಭಾಗದ ಅಭಿನಂದನಾ ಪುರಸ್ಕಾರ, ಮಕ್ಕಳ ವಿಭಾಗದ ಕಾರ್ಯಕ್ರಮದಲ್ಲಿ ವಿಶೇಷ ಪುರಸ್ಕಾರ, ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ವಿಶೇಷ ಪುರಸ್ಕಾರ, ಘಟಕ ನಿರ್ವಹಣೆ ವಿಭಾಗದಲ್ಲಿ ವಿಶೇಷ ಪುರಸ್ಕಾರ, ವ್ಯವಹಾರಿಕಾ ವಿಭಾಗ, ಸಾರ್ವಜನಿಕ ಸಂಪರ್ಕ ಮತ್ತು ಮಾರುಕಟ್ಟೆ ವಿಭಾಗದಲ್ಲಿ ವಿಶೇಷ ಪುರಸ್ಕಾರ ಸೇರಿದಂತೆ ಇತರೆ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡಿದೆ. ಈ ಸಂದರ್ಭದಲ್ಲಿ ಜೆಸಿಐ ವಲಯ 24ರ ಅಧ್ಯಕ್ಷರಾದ ಚೆನ್ನವೀರೇಶ್, ಉಪಾಧ್ಯಕ್ಷರಾದ ಸಂತೋಷ ಕೊಟ್ರಪ್ಪ ಸೋಗಿ, ಸುಷ್ಮಾ ಬಿ.ಹಿರೇಮಠ್, ಮುರುಳಿ, ರವೀಂದ್ರ, ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಸುಹಾಸ್ ಚಿತ್ರಗಾರ್, ಪೂರ್ವ ಅಧ್ಯಕ್ಷರು ಹಾಗೂ ಪೂರ್ವ ವಲಯ ಅಧಿಕಾರಿಗಳಾದ ಅರವಿಂದ್ ಬುರೆಡ್ಡಿ, ಪ್ರಸಾದ್ ಗಡಾದ್, ಕಂಪ್ಲಿ ಘಟಕದ ಪದಾಧಿಕಾರಿಗಳಾದ ಸಿದ್ದರಾಮೇಶ್ವರ, ಅಮರನಾಥ ಶಾಸ್ತ್ರಿ, ಕಟ್ಟೆ ನವೀನ್, ಎಸ್. ರವಿ ಸೇರಿದಂತೆ ವಲಯ ಮಟ್ಟದ ಅಧಿಕಾರಿಗಳು ಹಾಗೂ ಜೆಸಿ ಸದಸ್ಯರಿದ್ದರು.

Contact for News & Ads : 

6360633266 (Raghuveer)

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">