"ಸಾರ್ವಜನಿಕರಿಗೆ ಎಚ್ಚರ..!!
ಕೆರೆಯಲ್ಲಿ ಮೊಸಳೆಗಳಿವೆ, ಯಾರು ಕೆರೆಯಲ್ಲಿ ಇಳಿಯಬಾರದು."
ಕಂಪ್ಲಿ : ಐತಿಹಾಸಿಕ ಸೋಮಪ್ಪನ ಕೆರೆಯಲ್ಲಿ ಮೊಸಳೆಗಳಿವೆ ಎಂದು ಸಿದ್ದಿ ಟಿವಿ ವರದಿ ಮಾಡಿದ ಬೆನ್ನಲ್ಲೇ ಅರಣ್ಯ ಇಲಾಖೆ, ಪುರಸಭೆ ಹಾಗೂ ಪೋಲಿಸ್ ಇಲಾಖೆಯವರು 2ದಿನಗಳಿಂದ ಮೊಸಳೆ ಹಿಡಿಯುವ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.
ಸೋಮಪ್ಪನ ಕೆರೆಯ ಅಂಗಳದಲ್ಲಿ ದಿನಲೂ ಸಾವಿರಾರು ಜನರು ಓಡಾಡುವುದರಿಂದ, ಸಾರ್ವಜನಿಕಕರ ರಕ್ಷಣೆಯ ಹಿತದೃಷ್ಟಿಯಿಂದ ಕೆರೆಯಲ್ಲಿ ಪ್ರತ್ಯಕ್ಷವಾಗಿರುವ ಮೊಸಳೆಗಳನ್ನು ತಕ್ಷಣ ಹಿಡಿದು ನದಿಗೆ ಅಥವಾ ಬೇರೆಡೆಗೆ ಸ್ಥಳಾಂತರಿಸುವಂತೆ ಸಿದ್ದಿ ಟಿವಿ ವರದಿ ಮಾಡುವ ಮೂಲಕ ಸಂಬಂಧಪಟ್ಟ ಇಲಾಖೆಗೆ ಒತ್ತಾಯಿಸಿತ್ತು.
ನಮ್ಮ ವರದಿ ಪ್ರಸಾರವಾಗುತ್ತಿದ್ದಂತೆ ನಿನ್ನೆ, ಅರಣ್ಯ ಇಲಾಖೆ, ರೆಸ್ಕ್ಯೂ ಟೀಮ್ ಕಂಪ್ಲಿಯ ಸೋಮಪ್ಪನ ಕೆರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಮೊಸಳೆ ಹಿಡಿಯುವ ಕಾರ್ಯಚರಣೆ ಇಂದು ಮುಂದೂವರೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮೊಸಳೆ ನೋಡಲು ಮುಗಿಬಿದ್ದ ಜನರು..!
ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ ಎಂಬ ಸುದ್ದಿ ಪ್ರಸಾರವಾದ ಕೂಡಲೇ ಕಂಪ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕೆರೆಗೆ ಮೊಸಳೆ ನೋಡಲು ಮುಗಿಬಿದ್ದ ದೃಶ್ಯ ಇಲ್ಲಿದೆ ನೋಡಿ.
"ಕೆರೆಯ ಸುತ್ತ ಬಿತ್ತು ಎಚ್ಚರಿಕೆ ಬೋರ್ಡ್ "
ಸಿದ್ದಿ ಟಿವಿ ವರದಿಗೆ ಸ್ಪಂದಿಸಿದ ಕಂಪ್ಲಿ ಪುರಸಭೆ ಅಧಿಕಾರಿಗಳು, ಇಂದು ಬೆಳ್ಳಂ ಬೆಳಿಗ್ಗೆ ಕೆರೆಯ ಸುತ್ತಲೂ "ಮೊಸಳೆಗಳಿವೆ ಎಚ್ಚರಿಕೆ" ಎಚ್ಚರಿಕೆ ಫಲಕಗಳನ್ನು ಹಾಕಿದ್ದಾರೆ.