ತಮಗೆ ತಾವೇ ಮನವಿ ಪತ್ರ ಸಲ್ಲಿಸಿಕೊಂಡ ಕಾನೂನು ವಿದ್ಯಾರ್ಥಿಗಳು
ಬಳ್ಳಾರಿ : ತಮ್ಮ ಹಕ್ಕೊತ್ತಾಯಕ್ಕೆ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಲು ಹೋದಾಗ ಅಲ್ಲಿನ ಅಧಿಕಾರಿಗಳು ಮನವಿ ಸ್ವೀಕರಿಸುವಲ್ಲಿ ಹಿಂದು ಮುಂದು ಮಾಡಿದ್ದಾರೆ, ನಂತರ ಮನವಿ ಸಲ್ಲಿಸಿದ್ದನ್ನು ಪತ್ರಿಕಾ-ಮಾಧ್ಯಮಗಳಿಗೆ ಪ್ರಕಟಿಸಲು ಪೋಟೋ ತೆಗೆಸಿಕೊಳ್ಳಲು ವಿದ್ಯಾರ್ಥಿಗಳು ಕರೆದರೆ ನಿರಾಕರಿಸಿದ್ದಾರೆ.
ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವಂತೆ ಕಾನೂನು ವಿದ್ಯಾರ್ಥಿಗಳು ತಮಗೆ ತಾವೇ ಮನವಿ ಪತ್ರ ಸಲ್ಲಿಸಿಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಯೆಸ್ ವೀಕ್ಷಕರೇ, ಕೋವಿಡ್ ಸಂದರ್ಭದಲ್ಲಿ ಶಾಲಾ-ಕಾಲೇಜುಗಳ ಶೈಕ್ಷಣಿಕ ವರ್ಷವೂ ವ್ಯತ್ಯಾಯವಾಗಿದ್ದು ಇದ್ದರಿಂದ ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷವು ಹಿಂದೆ ಉಳಿದಿವೆ. ಪದವಿ, ಸ್ನಾತಕೋತ್ತರ, ಕಾನೂನು, ನರ್ಸಿಂಗ್ ಇನ್ನೂ ಹಲವಾರು ಕೋರ್ಸ್ ಗಳಿಗೆ ತರಗತಿಗಳು ಮತ್ತು ಪರೀಕ್ಷೆಗಳು ಅಕ್ಟೋಬರ್ ನವರಗೆ ನಡೆಯುತ್ತಿವೆ.
ಕೋರ್ಸ್ ಗಳು ಅಕ್ಟೋಬರ್ ವರೆಗೂ ನಡಿತ್ತಿದ್ದು, ಬಸ್ ಪಾಸ್ ಗಳು ಜೂನ್ 30ಕ್ಕೆ ಮುಗಿದಿದೆ ಆದರಿಂದ ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಬಸ್ ಪಾಸ್ ಗೆ ಹೆಚ್ಚುವರಿ ಶುಲ್ಕ ವಿಧಿಸದೇ, 4ತಿಂಗಳ ವರೆಗೂ ಉಚಿತವಾಗಿ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಸೈಯದ್ ವಾರೀಶ್, ವಿಜಯ್ ಕುಮಾರಗ, ಶರಣಪ್ಪ, ಮಣಿಕಂಠ, ಲಕ್ಷ್ಮೀಕಾಂತ, ಸುರೇಶ್, ಮಹಾಂತೇಶ್, ಗಿರೀಶ್ ಹಾಗೂ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.