ಗ್ರಾಮೀಣ ಜೆಸ್ಕಾಂ ಎಮ್ಮಿಗನೂರಿನ 110/11 ಕೆ.ವಿ ಉಪ-ಕೇಂದ್ರದಲ್ಲಿ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಜುಲೈ 02 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಕೆಳಗಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ ಎಂದು ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಬಾಬು ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಎಫ್-01 ಫೀಡರ್‍ನ ಗುತ್ತಿಗನೂರ ಐಪಿ ಮಾರ್ಗದ ಗುತ್ತಿಗನೂರು, ಓರ್ವಾಯಿ, ಎಮ್ಮಿಗನೂರು ಗ್ರಾಮ, ಕೃಷಿ ಪ್ರದೇಶಗಳು. ಎಫ್-02 ಫೀಡರ್‍ನ ಸೋಮಲಾಪುರ ಐಪಿ ಮಾರ್ಗದ ಎಮ್ಮಿಗನೂರು, ಸೋಮಲಾಪುರ, ತಿಮ್ಮನಕೆರೆ, ತಾತರಾಜ್ ಕ್ಯಾಂಪ್, ಬ್ರಹ್ಮಿಣಿ ಕ್ಯಾಂಪ್ ಕೃಷಿ ಪ್ರದೇಶಗಳು.
ಎಫ್-03 ಓರ್ವಾಯಿ ಎನ್‍ಜೆವೈ ಮಾರ್ಗದ ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು ಗ್ರಾಮಗಳು.
ಎಫ್-06 ಫೀಡರ್‍ನ ಎಮ್ಮಿಗನೂರು ನಗರದ ಮಾರ್ಗದ ಎಮ್ಮಿಗನೂರು, ತಿಮ್ಮನಕೆರೆ, ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು, ರಾಮಚಂದ್ರಪುರ ಕ್ಯಾಂಪ್. ಎಫ್-04 ಫೀಡರ್‍ನ ಮುದ್ದಾಪುರ ಐಪಿ ಮಾರ್ಗ ಎಮ್ಮಿಗನೂರು, ಬಾಳಾಪುರ, ಮುದ್ದಾಪುರ, ಕೃಷಿ ಪ್ರದೇಶಗಳು.
ಎಫ್-11 ಫೀಡರ್‍ನ ನೆಲ್ಲುಡಿ ಎನ್‍ಜೆವೈ ಮಾರ್ಗದ ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಬಾಳಾಪುರ, ಮೆಹಬೂಬ್ ನಗರ, ನೆಲ್ಲುಡಿ ಕೊಟ್ಟಾಲ್, ಶಾಂತಿನಗರ, ಶಂಕರ್‍ಸಿಂಗ್ ಕ್ಯಾಂಪ್, ಸುಬ್ಬಾರಾವ್ ಕ್ಯಾಂಪ್.
ಎಫ್-10 ಫೀಡರ್‍ನ ಶಾಂತಿನಗರ ಐಪಿ ಮಾರ್ಗದ ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಮೆಹಬೂಬ್ ನಗರ, ಕೊಟ್ಟಾಲ್, ಶಾಂತಿನಗರ, ಶಂಕರ್‍ಸಿಂಗ್ ಕ್ಯಾಂಪ್, ಸುಬ್ಬರಾವ್ ಕ್ಯಾಂಪ್ ಮತ್ತು ಕೃಷಿ ಪ್ರದೇಶಗಳು ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
ಸೂಚನೆ:
ಎಲ್ಲಾ ಕೃಷಿ ಪ್ರದೇಶದ ಫೀಡರ್‍ಗಳಿಗೆ ಬೆಳಿಗ್ಗೆ 04 ಗಂಟೆಯಿಂದ 10 ಗಂಟೆಯವರೆಗೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------