ಇಂದು ಮುದ್ದಾಪುರ ಆಗಸಿಯ ಮಸೀದಿಯ ಪೀರಲ ದೇವರ ಸವಾರಿ
ಕಂಪ್ಲಿ : ಹಿಂದೂ ಮತ್ತು ಮುಸ್ಲಿಂ ಎರಡು ಧರ್ಮಗಳು ಸೇರಿ ಜಾತಿ ಭೇದವನ್ನು ಮರೆತು ಮಾನವರೆಲ್ಲರು ಒಂದೆ ಎಂಬ ಮನೋಬಾವುಳ್ಳ ಹಬ್ಬವಾಗಿದ್ದು, ಹಿಂದು ಮತ್ತು ಮುಸ್ಲಿಂ ಬಾಯ್ ಬಾಯ್ ಎಂದು ಭಾನುವಾರ ವಿಜೃಬನೆಯಿಂದ ಮೊಹರಂ ಹಬ್ಬವನ್ನು ಅಚ್ಚರಿಸಲಾಯಿತು.
ಸಾರ್ವಜನಿಕರು ಮಾತನಾಡಿ, ಕಂಪ್ಲಿಯಲ್ಲಿ ವರ್ಷಕೋಮ್ಮೆ ಮೊಹರಂ ತಿಂಗಳಿನಲ್ಲಿ ನಗರದ ಎಲ್ಲ ಜನಾಂಗದವರು ಒಗ್ಗಟಿನಿಂದ ಯಾವು ಘಟನೆಗಳಿಗೆ ಎಡಮಾಡದೆ ಸಂತೋಷದಿಂದ ಅರ್ಚರಿಸುತ್ತವೆ ಎಂದರು.
ಹೊಸ ಬಸ್ ನಿಲ್ದಾಣದ ಬಳಿ ಮುದ್ದಾಪುರ ಆಗಸಿ ಬೀದಿಯಲ್ಲಿರುವ ಇಮಾಮ್ ಕಾಸೀಂ ತಾತ ರವರ ಮಸೀದಿ ಬಳಿ ಒಂದೇ ಸಮಯಕ್ಕೆ ಹಿಂದು ಮುಸ್ಲಿಂ ಮರು ಕೆಂಡತುಳಿದು ಭಕ್ತಿಯ ಪರಾಕಾಷ್ಠೆಯನ್ನು ಮೆರದರು.
ಶನಿವಾರ(ನಿನ್ನೆ) ರಾತ್ರಿ ಭಕ್ತರು ಉಪವಾಸ ಆಚರಣೆ ಮಾಡಿ, ಕೆಂಡ ತುಳಿಯುವರು ಗುಡಿಯ(ಮಸೀದಿ) ಬಳಿ ಆಗಮಿಸಿ ರಾತ್ರಿ ಇಡೀ ತಮಟೆಗಳ ಶಬ್ದಕ್ಕೆ ಹೆಜ್ಜೆ ಹಾಕುತ್ತಾ ಜಾಗರಣೆ ಮಾಡುವರು ನಂತರ ಸರಿಯಾಗಿ ಉರಿಯುವ ಕೆಂಡದ ಮೇಲೆ ದೇವರ ಹೆಸರನ್ನು ಕೂಗುತ್ತಾ ಕೆಂಡ ತುಳಿದರು.
ಇಂದು ಈ ದೇವರ ಸವಾರಿ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗುತ್ತಿದೆ.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ.(6360633266)