Kampli : ಕಾನಿಪ ಧ್ವನಿ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ


ಕಾ.ನಿ.ಪಾ ಧ್ವನಿ  ಕಂಪ್ಲಿ ತಾಲೂಕು ಘಟಕ ವತಿಯಿಂದ ಪತ್ರಿಕಾ ದಿನಾಚರಣೆ, ಹಾಗೂ ಕರ್ನಾಟಕ ರಾಜ್ಯ ಅಸ್ಪೃಶ್ಯ ವಿಮೋಚನ ಸಮಿತಿ, ಭೀಮ್ ಆರ್ಮಿ ತಾಲೂಕು ಅಧ್ಯಕ್ಷರರಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಯಶಸ್ವಿ.


ಕಂಪ್ಲಿ: ಪತ್ರಿಕೆ, ಮಾಧ್ಯಮಗಳು ಸಮಾಜದಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಮೊಬೈಲ್ ಗಳಿಗೆ ಮಾರುವಾಗದೆ, ಪತ್ರಿಕೆ ಓದುವ ಹವ್ಯಾಸ ರೂಡಿ  ಮಾಡಿಕೊಳ್ಳಬೇಕು, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ  ಶಿಕ್ಷಣದ ಜ್ಞಾನ, ಸಂವಿಧಾನದ  ಮಹತ್ವವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು  ಮಾ.ನಿ.ಪ್ರ. ಶ್ರೀ ಅಭಿನವ ಪ್ರಭು ಮಹಾಸ್ವಾಮಿಗಳು ಕಂಪ್ಲಿ ಕಲ್ಮಠ ಅವರು ತಿಳಿಸಿದರು.

ಪಟ್ಟಣದ ಪ್ರಥಮ ದರ್ಜೆ ಕಾಲೇಜು ಫಂಕ್ಷನ್ ಹಾಲ್  ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಕಂಪ್ಲಿ ತಾಲೂಕು ಘಟಕ, ಕರ್ನಾಟಕ ರಾಜ್ಯ ಅಸ್ಪೃಶ್ಯ ವಿಮೋಚನ ಸಮಿತಿ, ಭೀಮ್ ಆರ್ಮಿ  ಭರತ್ ಏಕತ್ ಮಿಷನ್  ತಾಲೂಕು ಅಧ್ಯಕ್ಷರ ಸಹಕಾರದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ 2023-24ನೇ ಸಾಲಿನ ಹತ್ತನೇ ತರಗತಿಯಲ್ಲಿ  ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ ತಾಲೂಕಿನ ಸರ್ಕಾರಿ ಶಾಲೆಯ  ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು, ಡಿಕ್ಷನರಿ ಕಾಲೇಜ್ ಬ್ಯಾಗ್, ಸಂವಿಧಾನ ಪೀಠಿಕೆ ಸೇರಿ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.


ನಂತರ ತಾಲೂಕು ಪಂಚಾಯಿತಿ ಇ. ಓ ಶ್ರೀಕುಮಾರ್ ಹಾಗೂ ಎ. ಡಿ ಮಲ್ಲನಗೌಡ ಮಾತನಾಡಿ ಪತ್ರಿಕೆ ಹಾಗೂ ಮಾಧ್ಯಮ ಇಲ್ಲದಿದ್ದರೆ ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಉಂಟಾಗುವುದಿಲ್ಲ, ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ತಿಳಿಯಬೇಕೆಂದರೆ ಅದು ಪತ್ರಿಕಾ ಮಾಧ್ಯಮಗಳಿಂದ ಸಾಧ್ಯ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕೆಂದರು.

ಸಿ ಪಿ ಐ ಕೆ.ಬಿ ವಾಸು ಕುಮಾರ್ ಮಾತನಾಡಿ ಪತ್ರಿಕಾ ರಂಗ ಸಾಮಾಜಿಕ ಕಳಕಳಿಯ ಬದ್ಧತೆಯಿಂದ ಇರುವಂತದ್ದು ಪತ್ರಿಕಾರಂಗವೂ 4ನೇ ಅಂಗವಾಗಿದೆ. ಸಮಾಜದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವ ಕೆಲಸ ಪತ್ರಿಕೋದ್ಯಮ ಮಾಡುತ್ತದೆ ಎಂದರು.

ಕಾ.ನಿ.ಪ ಧ್ವನಿ ರಾಜ್ಯಾಧ್ಯಕ್ಷ ಡಾಕ್ಟರ್ ಬಂಗ್ಲೆ ಮಲ್ಲಿಕಾರ್ಜುನ  ಮಾತನಾಡಿ ರಾಜ್ಯದ ಪತ್ರಕರ್ತರಿಗೆ  ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಪತ್ರಿಕೆ ಮಾಲೀಕರಾಗಲಿ ಜೊತೆಗಿಲ್ಲ. ಪತ್ರಕರ್ತರ ಕ್ಷೇಮಾಭಿವೃದ್ಧಿಯು ಸರಿಯಾಗಿ ದೊರಕುತ್ತಿಲ್ಲ. ಆದ್ದರಿಂದ  ಬರುವ ಡಿಸೆಂಬರ್ ನಿಂದ ನಮ್ಮ ಸಂಘದ ಸದಸ್ಯರಿಗೆ  ಕ್ಷೇಮಾಭಿವೃದ್ಧಿ ತೆರೆದು ಪತ್ರಕರ್ತರ ಆರೋಗ್ಯ, ಅಪಘಾತಗಳಂತ ಸಂದರ್ಭದಲ್ಲಿ ಸಹಾಯ ಮಾಡಲು ಹಣವನ್ನು ಮೀಸಲಿಡುತ್ತೇವೆ ಎಂದರು. 

ಕಿಶಾನ್ ಜಾಗೃತಿ ವಿಕಾಸ ಸಂಘ  ರಾಷ್ಟ್ರೀಯ ಅಧ್ಯಕ್ಷ ಪಿ. ಯುಗಂದರ  ನಾಯ್ಡು ಮಾತನಾಡಿ ತಾಲೂಕಿನ ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವೇದಿಕೆಯಲ್ಲಿ ಪ್ರೋತ್ಸಾಹಧನ ನೀಡುತ್ತಿದ್ದೇನೆ, ಮುಂದೇನು ನೀಡುತ್ತೇನೆ ಸರ್ಕಾರಿ ಶಾಲೆಯ ಪ್ರತಿಭಾವಂತ  ವಿದ್ಯಾರ್ಥಿಗಳ ಶಿಕ್ಷಣಕ್ಕೆ ನನ್ನ ಮಾಲಿಕತ್ವದ ಎರಡು ಎಕರೆ  ಜಮೀನನ್ನು ಮೀಸಲಿಟ್ಟಿದ್ದೇನೆ. ಪ್ರತಿವರ್ಷ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ಸಹಾಯ ಮಾಡಲು  ನಾನು ಸಿದ್ದ ಎಂದು ಈ ವೇದಿಕೆಯ ಮೂಲಕ ತಿಳಿಸುತ್ತಿದ್ದೇನೆ ಎಂದರು. 

ಪುರಸಭಾ ಸದಸ್ಯ ಸಿ ಆರ್ ಹನುಮಂತ, ದಲಿತ ಹಿರಿಯ ಮುಖಂಡ ಜಿ ರಾಮಣ್ಣ  ಮಾತನಾಡಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಹಾಗೂ ಅವರ ತಂಡವು ಡಿಗ್ರಿ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ,ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವ ಉದ್ದೇಶ ಈ ವೇದಿಕೆಯಲ್ಲಿ ಪ್ರತಿಭಾ ಪುರಸ್ಕಾರ ಪಡೆಯುವ ವಿದ್ಯಾರ್ಥಿಗಳನ್ನು ನೋಡಿ ತಾವು ಒಳ್ಳೆಯ ರೀತಿ ಓದಿ ಉನ್ನತ ಹುದ್ದೆ ಪಡೆದುಕೊಳ್ಳಬೇಕೆ ಎನ್ನುವ ಉದ್ದೇಶ  ಎಂದರು. 

ಶಿಕ್ಷಕರಾದ ರಮೇಶ ಸುಗ್ಗೆನಹಳ್ಳಿ ಪತ್ರಿಕೋದ್ಯಮದ ಕುರಿತು ಉಪನ್ಯಾಸ ನೀಡಿದರು

ಈ ಕಾರ್ಯಕ್ರಮದಲ್ಲಿ ತಾಲೂಕಿನ 12 ಸರ್ಕಾರಿ ಶಾಲೆ  ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ  ಪ್ರಥಮ ದರ್ಜೆ ಕಾಲೇಜಿನ 4 ವಿದ್ಯಾರ್ಥಿಗಳಿಗೆ ದಾನಿಗಳು ನೀಡಿದ ಪ್ರೋತ್ಸಾಹ ಧನ , ಸಂವಿಧಾನ ಪೀಠಿಕೆ,  ಬುಕ್ಕು, ಪೆನ್ನು, ಡಿಕ್ಷನರಿ, ಕಾಲೇಜ್ ಬ್ಯಾಗ್ ಗಳನ್ನು ವೇದಿಕೆ ಮೇಲಿದ್ದ ಗಣ್ಯರಿಂದ ವಿತರಿಸಲಾಯಿತು.

ಕರ್ನಾಟಕ ರಾಜ್ಯ ಆಸ್ಪೃಶ್ಯ ವಿಮೋಚನ ಸಮಿತಿ ರಾಜ್ಯ ಉಪಾಧ್ಯಕ್ಷ, ಕೆ ಲಕ್ಷ್ಮಣ, ಜಿಲ್ಲಾಧ್ಯಕ್ಷ ಬುಜ್ಜಿ ಕುಮಾರ್,  ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಬೆಳಗೋಡು ಸಣ್ಣೆಪ್ಪ ತಳವಾರ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ, ಪದಾಧಿಕಾರಿಗಳಾದ ಹುಸೇನಪ್ಪ ಅಂಗಜಾಲರ, ಸಿ ರಾಮಪ್ಪ, ಕೆ ಪ್ರಶಾಂತ್  ತಂಡದವರು ವಿವಿಧ ರಂಗದಲ್ಲಿ  ಸಾಧನೆಗೈದ ಸಾಧಕರಿಗೆ ಸಂವಿಧಾನ ಪೀಠಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ   ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ  ಚಂದ್ರಶೇಖರ ಬಿಳೇಗುಡ್ಡ, ಶಿಕ್ಷಣ ಸಂಯೋಜಕ ಪ್ರೌಢಶಾಲಾ ವಿಭಾಗ ಎಸ್ ಎಂ ಬಸವರಾಜ್, ಕಂಪ್ಲಿ ಕರ್ನಾಟಕ ಕಾರ್ಯನಿರತ  ಪತ್ರಕರ್ತರ ದ್ವನಿ ತಾಲೂಕು ಅಧ್ಯಕ್ಷ ರವಿ ಮಣ್ಣೂರು  ನಿವೃತ್ತ ಶಿಕ್ಷಕರ ಚನ್ನಬಸಪ್ಪ,  ಪಾಮಯ್ಯ ಶರಣರು, ರೈತ ಸಂಘದ ಅಧ್ಯಕ್ಷ ಕೊಟ್ಟೂರು ರಮೇಶ, ವಿಕ್ಟೋರಿ ರೆಸ್ಟೋರೆಂಟ್ ಮಾಲೀಕ ಸಿದ್ದಲಿಂಗಯ್ಯ ಗೌಡ, ಬಿ. ದೇವೇಂದ್ರ, ಆರ್ ಎಂ ರಾಮಯ್ಯ , ಸಿ ವೆಂಕಟೇಶ್, ಬೂದಗುಂಪಿ ಹುಸೇನ್ ಸಾಬ್ , ಪೋಲಿಸ್ ಸುರೇಶ, ಸತ್ಯನಾರಾಯಣ, ವಸಂತರಾಜ್ ಕಹಳೆ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಕಾಳಿ ಹುಸೇನಪ್ಪ, ಕಂಪ್ಲಿ ಮುಖಂಡ ಹುಲುಗಪ್ಪ, ಉಪನ್ಯಾಶಕ ಶಿವಾನಂದ, ಸಾಹಿತಿ ಬಂಗಿ ದೊಡ್ಡ ಮಂಜುನಾಥ, ಕಲಾವಿದರಾದ ಹನುಮಂತಪ್ಪ ಕಹಳೆ ವಸಂತ ಕುಮಾರ್, ರಮೇಶ್ ಶಿವಪುರ, ಟಿ ಎಚ್ ರಾಜಕುಮಾರ್ , ಬಳೆ  ಮಲ್ಲಿಕಾರ್ಜುನ ,ರಾಮಸಾಗರ  ಕರೆಂಟ್ ಗೋಪಾಲಪ್ಪ, ಸಪ್ಲೇಯರ್ ನಾಗರಾಜ್, ವಕೀಲ ಬಡಗಿ ದೊಡ್ಡಬಸವರಾಜ್, ಕೆ.ವಿರುಪಾಕ್ಷಿ,  ಕಾ. ನಿ. ಪ ಧ್ವನಿ ಜಿಲ್ಲಾ ಉಪಾಧ್ಯಕ್ಷ  ಚಂದ್ರಶೇಖರ ಬೋವೆರ್, ತಾಲೂಕು ಉಪಾಧ್ಯಕ್ಷ ಇಂದ್ರಜಿತ್, ಚನ್ನಕೇಶವ, ಮುದ್ದಾಪುರ ಸ್ವಾಮಿ. ಸೇರಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.



Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">