Kampli : ಕಂಪ್ಲಿಗೆ ತುಂಗೇಯ ಎಂಟ್ರಿ..!ಕಂಪ್ಲಿ ಹೊಳೆಗೆ ಜೀವಕಳೆ


ಕಂಪ್ಲಿಗೆ ತುಂಗೇಯ ಎಂಟ್ರಿ..!ಕಂಪ್ಲಿ ಹೊಳೆಗೆ ಜೀವಕಳೆ

ತುಂಗಭದ್ರಾ ಡ್ಯಾಂ ನ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಡ್ಯಾಂ ನ ಮೂರು ಗೇಟ್ ಗಳನ್ನು ತೆರೆಯಲಾಗಿತ್ತು, ಡ್ಯಾಂ ನಿಂದ ನದಿಗಳ ಮುಖೇನ ಇಂದು ಸಂಜೆ ಕಂಪ್ಲಿಯ ತುಂಗಾ ನದಿ(ಹೊಳೆ)ಗೆ ನೀರು ಬಂದಿದೆ.

ಕಳೆದ ಬಾರಿ ಅಂದರೆ 2023ರಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಲಮೂಲಗಳು ಬತ್ತಿಹೋಗಿದ್ದವು. ಅಲ್ಲದೆ, ಜಲಾಶಯಗಳಲ್ಲಿ ನೀರಿನ ಮಟ್ಟ ತಳಮಟ್ಟಕ್ಕೆ ಇಳಿದಿತ್ತು. ಇದೀಗ 2024ರ ಜೂನ್‌ ಆರಂಭವಾಗುತ್ತಿದ್ದಂತೆ ಮುಂಗಾರು ಮಳೆ ಆರಂಭವಾಗಿದ್ದು, ಇಲ್ಲಿಯವರೆಗೂ ಕೂಡ ಮಳೆರಾಯ ಆರ್ಭಟಿಸುತ್ತಲೇ ಇದ್ದಾನೆ. ಇದರಿಂದ ಜಲಮೂಲಗಳಿಗೆ ಜೀವಕಳೆ ಬಂದಂತಾಗಿದೆ.

ಅದರಲ್ಲೂ ಭಾರೀ ಮಳೆಯಿಂದ ಹಲವು ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತವನ್ನು ತಲುಪಿವೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಕೆಲವು ಜಲಾಶಯಗಳಿಂದ ನೀರನ್ನು ನದಿಗಳಿಗೆ ಹರಿಸಲಾಗುತ್ತಿದೆ.




Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">