ಕೊಟ್ಟಾಲ್ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕೋತಿ ಸೆರೆ
ಕಂಪ್ಲಿ : ಕೆಲ ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕೋತಿಯನ್ನು ಅರಣ್ಯ ಇಲಾಖೆ ಇಂದು ರಾತ್ರೋರಾತ್ರಿ ಬೋನಿನಲ್ಲಿ ಸೆರೆಯಾಗಿಸಿದ್ದು, ಗ್ರಾಮಸ್ಥರ ಆತಂಕ ನಿವಾರಿಸಿದ್ದಾರೆ.
ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ಕಂಡ ಕಂಡವರಿಗೆ ಕಚ್ಚುತ್ತಿದ್ದ ಕೋತಿ 40ಕ್ಕೂ ಅಧಿಕ ಜನರನ್ನು ಗಾಯಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಬೀಡುಬಿಟ್ಟು ಬೋನಿನ ಮುಖೇನ ಸೆರೆ ಹಿಡಿದ್ದಾರೆ.
ಈ ಕೋತಿಗೆ ಚಿಕಿತ್ಸೆ ನೀಡಿ ಬೇರೆ ಅರಣ್ಯ ಪ್ರದೇಶಕ್ಕೆ ರವಾನಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಫಾರೆಸ್ಟ್ ಬೀಟ್ ಆಫೀಸರ್ ರಾಘವೇಂದ್ರ ರವರು ತಿಳಿಸಿದ್ರು..
ಇನ್ನು ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯ ಅಧಿಕಾರಿಗಳಿದ್ದರು.