ಕಂಪ್ಲಿ : ನಗರದ ಶಾಲಾ-ಕಾಲೇಜುಗಳಿಗೆ ಪಕ್ಕದ ಚಿಕ್ಕ ಜಂತಕಲ್, ನಾಗನಹಳ್ಳಿಯಿಂದ ವಿದ್ಯಾರ್ಥಿಗಳು ಬರ್ತಾರೇ ಹಾಗೂ ಕಂಪ್ಲಿಯಿಂದ ಗಂಗಾವತಿಯ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗ್ತಾರೆ, ಆದರೆ, ಕಳೆದ 3-4ದಿನಗಳಿಂದ ತುಂಗಭದ್ರಾ ಡ್ಯಾಂ ನಿಂದ ನೀರು ಬಿಡುಗಡೆ ಹಿನ್ನೆಲೆ ಸೇತುವೆ ಮೇಲೆ ನೀರು ಬಂದ ಕಾರಣ ಜನ ಸಂಚಾರ ಸ್ಥಗಿತಗೊಳಿಸಲಾಗಿತ್ತು ತಾಲೂಕ ಮತ್ತು ಜಿಲ್ಲಾಡಳಿತ.
ಇಂದು ಡ್ಯಾಂ ನ ಒಳಹರಿವು ನೀರಿನ ಮಟ್ಟ ಕಡಿಮೆಯಾದ ಹಿನ್ನೆಲೆ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯ ಕೆಳಗಡೆ ನೀರು ಇಳಿದಿದೆ.
ಇಂದು ಮುಂಜಾನೆಯಿಂದ ಕಂಪ್ಲಿ ಪುರಸಭೆ ಸಿಬ್ಬಂದಿಗಳು ಸೇತುವೆ ಮೇಲೆ ಇದ್ದ ಕಸ-ತ್ಯಾಜ್ಯಗಳನ್ನು ಸ್ವಚ್ಚ ಕಾರ್ಯಮಾಡಿದ್ದಾರೆ.
ಇನ್ನಾದರೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೇತುವೆ ಮೇಲೆ ಹೋಗಲು ಬಿಡಿ ಎಂದು ಜನರು ವ್ಯಕ್ತಪಡಿಸಿದ್ರು.
ಇತ್ತ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತೆ ಎಂಬ ಭಯದಲ್ಲಿದ್ದಾರೆ. ಅತ್ತ ಅಧಿಕಾರಿಗಳು, ನಮ್ಮ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂಬ ಮುಂಜಾಗ್ರತಾ ಯೋಚನೆಯಿಂದ ಸೇತುವೆ ಮೇಲೆ ಜನ ಸಂಚಾರ ಸ್ಥಗಿತ ಮಾಡಿದ್ದಾರೆ.
ಪರ್ಯಾಯ ಮಾರ್ಗಕ್ಕಾಗಿ ಜನರು ಗೊಂದಲದಲ್ಲಿದ್ದಾರೆ.
ಈಗ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿದ್ದು, ಈ ಘಟನೆಯಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದು ಸತ್ಯ.
ಇದಕ್ಕೆ ಯಾವಾಗ ಮುಕ್ತಿ ಎಂಬುದನ್ನ ಸಂಭಂದಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಉತ್ತರಿಸಬೇಕಿದೆ.