1816ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ
ಕಂಪ್ಲಿ ಯೋಜನಾ ಕಚೇರಿ ವ್ಯಾಪ್ತಿಯ ಕುರುಗೋಡು ವಲಯದಲ್ಲಿ 1816ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀಯುತ ಹೆಮ್ಮೆಯ ಸ್ವಾಮಿಯವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಎಂ.ವಾಗೀಶ್ ಶ್ರೀಮತಿ ಡಾಕ್ಟರ್ ರೂಪ ಜಾಲಿಹಾಳ್ ವೈದ್ಯಾಧಿಕಾರಿಗಳು ಸಿ ಎಚ್ ಸಿ ಕುರುಗೋಡು, ಸುಧೀರ್ ಸದಸ್ಯರ ಜಿಲ್ಲಾ ಜನಜಾಗೃತಿ ವೇದಿಕೆ ಕಂಪ್ಲಿ ಕೊಪ್ಪಳ ಪ್ರಾದೇಶಿಕ ಕಚೇರಿಯ ಜನಜಾಗೃತಿ ಯೋಜನಾಧಿಕಾರಿಗಳು ನಾಗೇಶ್ ಕಂಪ್ಲಿ ತಾಲೂಕಿನ ಯೋಜನಾಧಿಕಾರಿಗಳು ಹಾಲಪ್ಪ ದಿವಾಕರ್ ಪೂಜಾರಿ ಶಿಬಿರ ಅಧಿಕಾರಿಗಳು, ಆರೋಗ್ಯ ಸಹಾಯಕಿ ಕುಮಾರಿ ಶ್ವೇತ ಜನಜಾಗೃತಿ ಮೇಲ್ವಿಚಾರಕರಾದ ಸಚಿನ್ ವಲಯದ ತಾಲೂಕಿನ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ಸೇವಾ ಪ್ರತಿನಿಧಿಗಳ ಊರಿನ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.