ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಯಂತ್ರ ಶ್ರೀ ಮೂಲಕ ಭತ್ತ ನಾಟಿ ಮಾಡಲು ಬಗ್ಗೆ ಇಂದು ಸಸಿ ಮಡಿ ತಯಾರಿಗೆ ಚಾಲನೆ.
ಇಂದು ಗೆಣಕಿಹಾಳ ಗ್ರಾಮದ ರೈತರಾದ ಪರವನಗೌಡ ಅವರ 10 ಎಕ್ರೆಯಲ್ಲಿ ಯಂತ್ರ ಶ್ರೀ ಮೂಲಕ ಭತ್ತ ನಾಟಿ ಮಾಡುವ ಬಗ್ಗೆ ಸಸಿ ಮಡಿ ತಯಾರಿ ಮತ್ತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಭಾಗದ ಸುಮಾರು 60 ಜನ ರೈತರಿಗೆ ಸಸಿ ಮಡಿ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ಮಾಡಲಾಯಿತು.
ಈ ಕಾರ್ಯಕ್ರಮದ್ಲಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಕೃಷಿ ಅಧಿಕಾರಿಯಾದ ಶ್ರೀ ಸಂಜುಕುಮಾರ್ ಅವರು ರೈತರಿಗೆ ಯಂತ್ರ ಶ್ರೀ ಯೋಜನೆ ಬಗ್ಗೆ, ಯಾಂತ್ರಿಕರಣ ಬಳಕೆ ಮಾಡಿ ಭತ್ತ ನಾಟಿ ಮಾಡುವ ಬಗ್ಗೆ, ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ, ಕಡಿಮೆ ಬೀಜ ಬಳಕೆ, ಕಡಿಮೆ ಆಳುಗಳ ಬಳಕೆ, ನರ್ಸರಿ ತಯಾರಿಗೆ ಒಳ್ಳೆ ಫಲವತ್ತಾದ ಮಣ್ಣು ಸಂಗ್ರಹಣೆ, ಟ್ರೈ ಖರೀದಿ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಎಂ. ದಯಾನಂದ್ ಸರ್ ಸಹಾಯಕ ಕೃಷಿ ನಿರ್ದೇಶಕರು.ಬಳ್ಳಾರಿ, ಡಾ.ರವಿ, ಮಣ್ಣು ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ ಹಗರಿ, ಕೃಷಿ ಅಧಿಕಾರಿ ಎಂ.ದೇವರಾಜ್ ರೈತ ಸಂಪರ್ಕ ಕೇಂದ್ರ ಕುರುಗೋಡು, ಶ್ರೀಮತಿ ಕವಿತಾ ಉಪ ಯೋಜನಾ ನಿರ್ದೇಶಕರು, ಆತ್ಮ ಯೋಜನೆ , ಶ್ರೀ.ವಾಣಿ ಕೊರಪ್ಪಳ, ತಾಲೂಕು ತಾಂತ್ರಿಕ ವ್ಯವಸ್ಥಾಪಕರು, ಬಳ್ಳಾರಿ, ರೇಣುಕಾರಾಧ್ಯಾ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು, ರೈತ ಸಂಪರ್ಕ ಕೇಂದ್ರ ಕುರುಗೋಡು,ಹಾಗೂ ಗ್ರಾಮದ ಆಸಕ್ತಿ ಹೊಂದಿರುವ ರೈತ ಬಾಂಧವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿ ಹಿಂಗಾರು ಹಂಗಾಮಿನಲ್ಲಿ ಇನ್ನು ಹೆಚ್ಚಿನ ರೈತರು ಅನುಷ್ಠಾನ ಮಾಡುವುದಾಗಿ ತಿಳಿಸಿದರು.