Ballari : ಮುಂಗಾರು ಜಾನಪದ ಮಹೋತ್ಸವ: ಸಂಗೀತ ಕಾರ್ಯಕ್ರಮ


ಬಳ್ಳಾರಿ : ಹೊಸ ಯರ್ರಗುಡಿಯ ಗ್ರಾಮ, ಬಳ್ಳಾರಿ ತಾಲೂಕು ಬಳ್ಳಾರಿ ಜಿಲ್ಲೆ ಈ ಗ್ರಾಮದಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಪ್ರಾಯೋಜಿತ ಕಾರ್ಯಕ್ರಮದಡಿ ಹಾಗೂ ಶ್ರೀರಾಮ ಸಂಗೀತ ಕಲಾ ಟ್ರಸ್ಟ್ ಕುರುಗೋಡು ಇವರ ವತಿಯಿಂದ ಮುಂಗಾರು ಜಾನಪದ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜಾನಪದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮವು ದಿನಾಂಕ 5.8.2024 ರಂದು ಸಂಜೆ ಐದು ಗಂಟೆಗೆ 5:00ಗೆ ಹೊಸ ಯರ್ರಗು ಡಿಯ ಕೊಲ್ಲಾಪುರಂ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಕ್ರಮ ಮಾಡಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಸಿದ್ದರಾಮಪ್ಪ ವಹಿಸಿಕೊಂಡರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ನಾಗಮೂರ್ತಿ ಶಿಕ್ಷಕರು ಹೊಸಯರ್ರಗುಡಿ ಇವರು ಮಾತನಾಡಿ ಈ ತರ ಕಾರ್ಯಕ್ರಮಗಳು ಮಾಡುವುದರಿಂದ ನಮ್ಮ ಮೂಲ ಕಲೆ ಸಾಹಿತ್ಯಗಳು ಉಳಿಯುತ್ತವೆ ಟಿವಿ ಮಾಧ್ಯಮಗಳು ಮತ್ತು ಮೊಬೈಲ್ ಮಾಧ್ಯಮಗಳು ಬಂದಿರುವುದರಿಂದ ನಮ್ಮ ಮೂಲ ಕಲೆಗಳು ನಶಿಸುತ್ತಾವೆ ಮುಂದಿನ ಪೀಳಿಗೆಗಾಗಿ ಮೂಲ ಜಾನಪದ ಹಾಡುಗಳು ಲಾವಣಿ ಪದ ತತ್ವಪದ ಗೀಗಿ ಪದ ಇನ್ನು ಅನೇಕ ರೀತಿಯ ಮೂಲ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಾಗುತ್ತದೆ ಎಂದು ಉದ್ಘಾಟನೆ ನುಡಿಗಳನ್ನು ಹೇಳಿದರು . ಕಾರ್ಯಕ್ರಮದ ಪ್ರಾಸ್ತವಿಕ ನುಡಿಗಳನ್ನು ಎಚ್ ರಮೇಶ್ ಅವರು ಮಾತನಾಡಿ ಎಲ್ಲಾ ಕಲೆಗಳಿಗೆ ಜಾನಪದವೇ ಮೂಲ ಬೇರು ಎಂದು  ತಿಳಿಸಿದರು. ನಮ್ಮ ನಿಮ್ಮ ಮೂಲ ಕಲೆಗಳನ್ನ ನಮ್ಮ ಮುಂದಿನ ಪೀಳಿಗೆಗೆ ನಾವೆಲ್ಲ ಪರಿಚಯ ಮಾಡಬೇಕಾಗುತ್ತದೆ ತಮ್ಮ ಒತ್ತಡ ನಿವಾರಣೆಗಾಗಿ ಮೂಲ ಕಲೆಗಳ ಉಳಿಸುವ ಸಲುವಾಗಿ ಗ್ರಾಮಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ತಮ್ಮ ಪ್ರಾಸ್ತಾವಿಕ  ನುಡಿ ಹೇಳಿದರು  ಕೊನೆಯದಾಗಿ ಸಾಂಸ್ಕೃತಿ ಕಾರ್ಯಕ್ರಮ ಹುಲುಗಪ್ಪ ಮತ್ತು ತಂಡದವರಿಂದ ಜಾನಪದ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರು ವೀರೇಶ್ ದಳವಾಯಿ. ಹೆಚ್ ಜಿ ಸುಂಕಪ್ಪ. ಹೆಚ್.ರಮೇಶ. ಹೆಚ್ ಏಸಯ್ಯ ಗ್ರಾಮದ ಗುರಿ ಹಿರಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು  ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">