Ballari : ಹೆಣ್ಣು ಮಗುವಿನ ಪೋಷಕರ ಪತ್ತೆಗಾಗಿ ಮನವಿ


ಹೆಣ್ಣು ಮಗುವಿನ ಪೋಷಕರ ಪತ್ತೆಗಾಗಿ ಮನವಿ

ಬಳ್ಳಾರಿ :ನಗರದ ರೈಲ್ವೆ ನಿಲ್ದಾಣ  ಫ್ಲಾಟ್ ಫಾರಂ ಸಂಖ್ಯೆ ಒಂದರಲ್ಲಿ ಶೈಲೂ ಎನ್ನುವ 06 ವರ್ಷದ ಹೆಣ್ಣು ಮಗು ಜು.17 ರಂದು ಪತ್ತೆಯಾಗಿದ್ದು, ರೈಲ್ವೆ ಪೊಲೀಸ್ ಅಧಿಕಾರಿಗಳು ರಕ್ಷಣೆ ಮಾಡಿ, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳ ಮುಖಾಂತರ ಮಗುವನ್ನು ಅಮೂಲ್ಯ ವಿಶೇಷ ದತ್ತು ಸಂಸ್ಥೆಗೆ ದಾಖಲು ಮಾಡಿದ್ದು, ಪಾಲನೆ ಮತ್ತು ಪೋಷಣೆ ಮಾಡಲಾಗುತ್ತಿದೆ. ಹೆಣ್ಣುಮಗುವಿನ ಪೋಷಕರ ಪತ್ತೆಗೆ ಸಹಕರಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಎಳೆ ನಾಗಪ್ಪ ಮನವಿ ಮಾಡಿದ್ದಾರೆ.

ಮಗುವಿನ ಚಹರೆ ವಿವರ:

ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ.

ಹೆಣ್ಣು ಮಗುವಿನ ಪೋಷಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ, ಅಮೂಲ್ಯ(ಜಿ) ವಿಶೇಷ ದತ್ತು ಸಂಸ್ಥೆಯ ಅಧೀಕ್ಷಕರು ಅಥವಾ ನಗರದ ಕಂಟೋನ್‌ಮೆಂಟ್‌ನ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂ: 08392-297101 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">