ಕಂಪ್ಲಿ ಪುರಸಭೆ ಅಧ್ಯಕ್ಷ, ಉಪಧ್ಯಕ್ಷ ಸ್ಥಾನದ ಚುನಾಚಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ
ಕಂಪ್ಲಿ : ಸರ್ಕಾರ ಇತ್ತೀಚೆಗೆ ಹೊರಡಿಸಿದ್ದ ಮೀಸಲಾತಿ ಪಟ್ಟಿಯಲ್ಲಿ ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ)ಕ್ಕೆ ಸಿಕ್ಕಿತ್ತು.
ಆಗಷ್ಟ್ 21ಕ್ಕೆ ಚುನಾವಣೆ ನಿಗದಿಯಾಗಿತ್ತು. ಸರದಿ(ರೊಟೆಶನ್) ಪ್ರಕಾರ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಬೇಕಿತ್ತು ಎಂದು ಪುರಸಭೆ ಸದಸ್ಯ ಎನ್. ರಾಮಾಂಜನೇಯಲು ಧಾರವಾಡ ಹೈಕೋರ್ಟ್‌ಗೆ ಪೂರಕ ದಾಖಲೆ ಸಲ್ಲಿಸಿದ್ದರು. ಹೈಕೋರ್ಟ್ ಪರಿಶೀಲನೆ ಬಳಿಕ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆ ಆ.28ಕ್ಕೆ ನಿಗದಿಯಾಗಿದೆ.
17ತಿಂಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿಯಾಗುತ್ತಿದ್ದಂತೆ ಆಕಾಂಕ್ಷಿ ಅಭ್ಯರ್ಥಿಗಳು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಏಕಾಏಕಿತಡೆಯಾಜ್ಞೆ ಬಂದಿದ್ದರಿಂದ ಆಕಾಂಕ್ಷಿಗಳಿಗೆ ಆಶಾಭಂಗವಾಗಿದೆ.