ಶೇ.40ಕ್ಕಿಂತ ಕಡಿಮೆ ದಿವ್ಯಾಂಗರಿಗೆ ಯುಡಿಐಡಿ ಕಾರ್ಡ್-ಪ್ರಮಾಣ ಪತ್ರ ನೀಡದಂತೆ ಮನವಿ
ಆದೇಶ ಹಿಂಪಡೆಗೆ ಸರ್ಕಾರಕ್ಕೆ ಆಗ್ರಹ
ಧಾರವಾಡ: ಆರೋಗ್ಯ ಇಲಾಖೆ ಹೊರಡಿಸಿದ ಶೇ.40ಕ್ಕಿಂತ ಕಡಿಮೆ ವಿಕಲತೆ ಹೊಂದಿದ ದಿವ್ಯಾಂಗರಿಗೆ ಯುಡಿಐಡಿ ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಆದೇಶ ಹಿಂಪಡೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ರಾಜ್ಯ ಘಟಕದಿಂದ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಬಹುತೇಕರು ಸರ್ಕಾರಿ ಮಾಶಾಸನ ನಂಬಿಯೇ ಜೀವನ ನಡೆಸುತ್ತಿದ್ದಾರೆ. ಈಗಿರುವ ದಿವ್ಯಾಂಗರಿಗೆ ಮಾಶಾಸನ ನೀಡಲು ಸರ್ಕಾರ ಹೆಣಗಾಡುತ್ತಿದೆ. ಇಂತಹ ಸಂದರ್ಭದಲ್ಲಿ ಶೇ.40ಕ್ಕಿಂತ ಕಡಿಮೆ ವಿಕಲತೆ ಹೊಂದಿದ ದಿವ್ಯಾಂಗರಿಗೆ ಯುಡಿಐಡಿ ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ನೀಡುವುದು ಅವೈಜ್ಞಾನಿಕ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಶೇ.40ಕ್ಕಿಂತ ಕಡಿಮೆ ವಿಕಲತೆ ಹೊಂದಿದ ದಿವ್ಯಾಂಗರಿಗೆ ಯುಡಿಐಡಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಆರೋಗ್ಯ ಇಲಾಖೆ ಆದೇಶ ನಿಜವಾದ ದಿವ್ಯಾಂಗರಿಗೆ ಮಾರಕವಾಗಿ, ಸರ್ಕಾರದ ಸೌಲಭ್ಯಗಳಿಂದ ವಂಚಿತರನ್ನಾಗಿಸಲಿದೆ ಎಂದು ಒಕ್ಕೂಟ ಮನವಿಯಲ್ಲಿ ತಿಳಿಸಿದೆ.
ಕೆಲವು ವೈದ್ಯಾಧಿಕಾರಿಗಳು ಹಣದಾಸೆಗೆ ನಕಲಿ ಪ್ರಮಾಣ ಪತ್ರ ನೀಡಿದ ಬಗ್ಗೆ ಪತ್ರಿಕೆಗಳಲ್ಲಿ ವರದಿ ಆಗಿದೆ. ಶೇ.40ಕ್ಕಿಂತ ಕಡಿಮೆ ವಿಕಲಾಂಗರಿಗೂ ಯುಡಿಐಡಿ ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಆರೋಗ್ಯ ಇಲಾಖೆ ಆದೇಶ ಭವಿಷ್ಯದಲ್ಲಿ ವೈದ್ಯರಿಗೆ ವೈದ್ಯರಿಗೆ ಹಣ ಮಾಡಲು ಹಾಗೂ ನಕಲಿ ದಿವ್ಯಾಂಗರ ಸೃಷ್ಠಿಗೂ ದಾರಿಯಾಗಲಿದೆ ಎಂದಿದೆ.
ಹೀಗಾಗಿ ಶೇ. 40ಕ್ಕಿಂತ ಕಡಿಮೆ ವಿಕಲತೆ ಹೊಂದಿರುವ ದಿವ್ಯಾಂಗರಿಗೆ ಯುಡಿಐಡಿ ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ನೀಡಬೇಕೆಂಬ ಆರೋಗ್ಯ ಇಲಾಖೆ ಆದೇಶ ಹಿಂಪಡೆಗೆ ಆಗ್ರಹಿಸಿದ ಕರ್ನಾಟಕ ರಾಜ್ಯ ವಿಕಲಚೇತನರ ರಾಜ್ಯ ಒಕ್ಕೂಟವು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯ ಸಂಚಾಲಕ ಕೇಶವ ತೆಲಗು, ಮಹೇಶ ಗೂಳಪ್ಪನವರ, ಸಂತೋಷ ಹಿರೇಮಠ, ವಿಠ್ಠಲ ಲಾಡರ, ರಾಘವೇಂದ್ರ ಜೋಶಿ, ಆನಂದ ಹಾಗೂ ಕಾಂತೇಶ ಇದ್ದರು.