ಹುಬ್ಬಳ್ಳಿ: ಪರಿಶಿಷ್ಟ ಜಾತಿ , ಪರಿಶಿಷ್ಠ ಪಂಗಡಹಾಗೂ ಹಿಂದುಳಿದ ವರ್ಗ ಮಹಾಸಭಾ ಸಭೆ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗ ಮಹಾಸಭೆ ವತಿಯಿಂದ ದಿನಾಂಕ: 04-08-2024 ರಂದು ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ವಿವಿಧ ಸಂಘಟನೆಯ ದಲಿತ ಮುಖಂಡರು, ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.
ಸಭೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಮೊದಲಿನ ಹಾಗೆ ಎಲ್ಲಾ ದಲಿತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ನ್ಯಾಯ ದೊರಕಿಸಲು ಸಾಧ್ಯ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಸಮುದಾಯಗಳ ಸಮಸ್ಯೆ ಬಗ್ಗೆ ಮತ್ತು ಸಮುದಾಯವನ್ನು ಒಗ್ಗೂಡಿಸುವುದು, ಸಮುದಾಯದ ಮೇಲೆ ಅನ್ಯಾಯ ಆಗುತ್ತಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಅನ್ಯಾಯಕ್ಕೊಳಗಾದ ಸಮುದಾಯದ ಬಗ್ಗೆ ಯಾರೊಬ್ಬ ಮುಖಂಡರು ಧ್ವನಿ ಎತ್ತುತ್ತಿಲ್ಲ.ಇದಕ್ಕೆ ಮೂಲ ಕಾರಣ ನಮ್ಮಲ್ಲಿ ಇರುವ ಒಗ್ಗಟ್ಟಿನ ಕೊರತೆ.
ಎಸ್.ಸಿ./ಎಸ್.ಟಿ./ ಓ.ಬಿ.ಸಿ. ಸಮುದಾಯದವರು ಅನ್ಯರ ದೌರ್ಜನ್ಯ ಹಾಗೂ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಎಸ್.ಸಿ, ಎಸ್.ಟಿ. ಓ.ಬಿ.ಸಿ. ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಕಾನೂನಿನ ಹೋರಾಟಕ್ಕೆ ನ್ಯಾಯ ಒದಗಿಸಲು ಎಸ್.ಸಿ./ಎಸ್.ಟಿ./ ಓ.ಬಿ.ಸಿ. ಮಹಾಸಭೆ ಸಂಘಟನೆಯ ಎಸ್.ಸಿ.ಎಸ್.ಟಿ. ಸಮುದಾಯವನ್ನು ಒಗ್ಗೂಡಿಸಲು ಬದ್ಧವಾಗಿದೆ.
ಇನ್ನೂ ಹಲವಾರು ಗಂಭೀರವಾದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಜೈ ಭೀಮ್ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷರಾದ ಆಯುಷ್ಮಾನ್ ಬಿ.ಶಿವಕುಮಾರ್, ರವೀಂದ್ರ ಕಲ್ಯಾಣಿ. ಮಾರುತಿ ದೊಡ್ಡಮನಿ.ಲಕ್ಷಣ ಬಕ್ಕಾಯಿ. ಪ್ರೇಮನಾಥ ಚಿಕ್ಕತುಬಂಳ. ಮೋಹನ್ ಹಿರೇಮನಿ. ಗಣೇಶ ದೊಡ್ಡಮನಿ. ಬಸಂತ ಕುಮಾರ್ ಅನಂತಪೂರ. ಶ್ರೀಧರ್ ಕಣ್ಣಮಕಲ್. ಶಂಕರ ಅಜ್ಜಮನಿ. ಮಂಜುನಾಥ ಕೊಂಡಪಲ್ಲಿ. ಗೋವಿಂದ ಬೆಲ್ಡೋಣಿ. ರಾಜು ಗಾಣದಾಳ. ಮಲ್ಲಿಕಾರ್ಜುನ ಬಿಳ್ಳಾರ. ಸಂತೋಷ್ ಜಕ್ಕಪ್ಪನವರ್. ಸುರೇಶ್ ಖಾನಾಪುರ. ಶಂಕರ್ ಭೋಜಗಾರ್. ಮುಂತಾದ ಮುಖಂಡರು ಭಾಗವಹಿಸಿದ್ದರು.
ವರದಿ : ನಾಗರಾಜ ಭೀ ಜಾಲಿಗಿಡದ