Kampli : ಕೋಟೆ ಜನರಿಗೆ 20 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ


ಕೋಟೆ ಜನರಿಗೆ 20 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ

ನದಿ ಪಾತ್ರದ ಕೋಟೆ ಜನರಿಗೆ ಇದ್ಯಾವ ಪರಿಸ್ಥಿತಿ..!

ಕಂಪ್ಲಿ : ನಗರದ ಕೋಟೆಯ ಜನರಿಗೆ ಸುಮಾರು 20 ದಿನಗಳಿಂದ ಕುಡಿಯಲು ನೀರು ಇಲ್ಲ, ಸರಿಯಾದ ನೀರು ಪೂರೈಕೆ ಮಾಡುತ್ತಿಲ್ಲ.

ಅಧಿಕಾರಿಗಳ ಹಾಗೂ ಪುರಸಭೆ ಸದಸ್ಯರ ನಿರ್ಲಕ್ಷ್ಯ..!

ತುಂಗಭದ್ರೆ ನದಿಯ ಪಾತ್ರದಲ್ಲಿರುವ ಕೋಟೆ ಜನರಿಗೆ ದಿನದ 24 ಗಂಟೆಗಳ ಕಾಲ ನೀರು ಪೂರೈಕೆ ಆಗುತ್ತಿತ್ತು, 15ದಿನದ ಹಿಂದೆ ನೀರು ಸರಬರಾಜು ಮಾಡುವ ಮೋಟಾರ್ ತೊಂದರೆಯಾಗಿದೆ ಅಂತ ಒಂದು ವಾರ ನೀರು ಪೂರೈಕೆ ನಿಲ್ಲಿಸಿದ್ರು ನಂತರ, ಮತ್ತೆ ಮೋಟಾರ್ ಹಾಳಾಗಿದೆ ಎಂದು ಈಗ ನೀರು ಪೂರೈಕೆ ಕಡಿತಗೊಳಿಸಿರುವುದು ಕೋಟೆ ಗ್ರಾಮಸ್ಥರ ಆಕ್ರೋಶಕ್ಕೆ ಏಡೆ ಮಾಡಿಕೊಟ್ಟಿದೆ.

ಇದಕ್ಕೆ ಸಂಭಂದಪಟ್ಟ ಅಧಿಕಾರಿಗಳಿಗೆ ಹಾಗೂ ಪುರಸಭೆ ಸದಸ್ಯರಿಗೆ ತಕ್ಷಣ ಈ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಸಿದ್ದಿ ಟಿವಿ ಮೂಲಕ ಒತ್ತಾಯಿಸಿದ್ದಾರೆ.

ರಘುವೀರ್, ಸಿದ್ದಿ ಟಿವಿ, ಕಂಪ್ಲಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">