ಕಾನಿಪ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ
ಕಂಪ್ಲಿ : ನಗರದ ಖಾಸಗಿ ಕಾಲೇಜು ಆವಣರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಕಂಪ್ಲಿ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಜೆ.ಎನ್.ಗಣೇಶ್, ಪತ್ರಕರ್ತರಿಗೆ ರಕ್ಷಣೆ ಬೇಕಿದೆ, ಹಗಲು-ಇರುಳು ಎನ್ನದೇ, ಅಂಕು-ಡೊಂಕುಗಳ ಕುರಿತು ಸುದ್ದಿ ಮಾಡುವ ಮೂಲಕ ಸಂಭಂದಪಟ್ಟವರಿಗೆ ಎಚ್ಚರಗೊಳಿಸಿ ಸರಿಪಡಿಸುವವರು ಪತ್ರಕರ್ತರು. ಪತ್ರಕರ್ತರಿಗೆ ರಕ್ಷಣೆ ಹಾಗೂ ಮೂಲ ಸೌಕರ್ಯಗಳನ್ನು ಓದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವೆ ಎಂದು ಹೇಳಿದರು.
ಇನ್ನು ಈ ಸಂದರ್ಭದಲ್ಲಿ ತಹಶಿಲ್ದಾರ್ ಶಿವರಾಜ್, ತಾಲೂಕು ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಮತ್ತು ಮುಖಂಡರು ಸೇರಿದಂತೆ ಕಾನಿಪ ಸಂಘದ ಸದಸ್ಯರು ಭಾಗಿಯಾಗಿದ್ದರು.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ