ಪರಿಶಿಷ್ಟರಲ್ಲಿ ಒಳ ಮೀಸಲಾತಿ ಕಾನೂನು ಬದ್ದ : ಕಾನೂನು ವಿದ್ಯಾರ್ಥಿ ದೊಡ್ಡ ಬಸವರಾಜ್ ಬಡಗಿ
ಕಂಪ್ಲಿ : ಸುಪ್ರೀಂ ಕೋರ್ಟ್ ಒಳ ಮೀಸಲಾತಿ ನೀಡುವುದರಿಂದ ಸಂವಿಧಾನ ಉಲ್ಲಂಘನೆ ಮಾಡಿದಂತೆ ಆಗುವುದಿಲ್ಲ ಎಂಬ ತೀರ್ಪು ನೀಡಿರುವುದು ಸ್ವಾಗತಾರ್ಹ. ಇಂದು ಸುಪ್ರೀಂ ಕೋರ್ಟ್ನಲ್ಲಿ ಪರಿ ಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳಮಿಸಲಾತಿಯ ನ್ಯಾಯಮೂರ್ತಿಗಳ ಚಂದ್ರಚೂಡ್ ಸೇರಿದಂತೆ 7 ನ್ಯಾಯಮೂರ್ತಿಗಳ ಪೀಠ ಇಂದು ಐತಿಹಾಸಿಕ ತೀರ್ಪು ನೀಡಿದೆ. ಎಂದು ಕಾನೂನು ವಿದ್ಯಾರ್ಥಿ ದೊಡ್ಡ ಬಸವರಾಜ್ ಬಡಗಿ ಪತ್ರಕರ್ತ ಮಾಧ್ಯಮ ಜೊತೆ ಮಾತನಾಡಿ ಪರಿಶಿಷ್ಟ ಜಾತಿಯಲ್ಲಿರುವ ಹಲವು ಜಾತಿಗಳು ಇದುವರೆಗೆ ಸಂವಿಧಾನದ ಫಲ ಪಡೆದುಕೊಂಡಿಲ್ಲ. ಇದೀಗ ಇದಕ್ಕೆ ಅವಕಾಶ ಕೊಡುವ ರೀತಿಯಲ್ಲಿ ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಯಾಲಯವರು ಒಂದು ವೇಳೆ ಪರಿಶಿಷ್ಟರಲ್ಲಿ ಒಳ ಮೀಸಲಾತಿ ನೀಡಿದರೆ ಅದು ಯಾವುದೇ ರೀತಿಯ ಉಲ್ಲಂಘನೆ ಆಗಲ್ಲ. ಆರ್ಟಿಕಲ್ 14 ಅಥವಾ 341(1), ಆರ್ಟಿಕಲ್ 15ರ ಉಲ್ಲಂಘನೆ ಮಾಡಿದಂತೆ ಆಗುವುದಿಲ್ಲ ಎಂಬ ತೀರ್ಪನ್ನು ನ್ಯಾಯಮೂರ್ತಿಗಳು ನೀಡಿದ್ದಾರೆ.
ಇಡೀ ದೇಶದಲ್ಲಿ ಸಂವಿಧಾನದ ರಕ್ಷಣೆಯ ಹೊಣೆ ಹೊತ್ತ ಸುಪ್ರೀಂ ಕೋರ್ಟ್ ಅದರಲ್ಲೂ ವಿಶೇಷವಾಗಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮತ್ತೊಂದು ಮಹತ್ತರ ತೀರ್ಪು ನೀಡಿ ಸಂವಿಧಾನ ಎತ್ತಿಹಿಡಿದ್ದಾರೆ. ಸಂವಿಧಾನ ಇರುವುದೇ ಎಲ್ಲರಿಗು ಸಮಾನವಾಗಿ ಬದುಕುವ ಅವಕಾಶ ಸಿಗಬೇಕು. ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎಂಬ ಉದ್ದೇಶವನ್ನು ಸಾಕಾರ ಮಾಡಲು. ಅಂತಹ ಕಾರ್ಯಕ್ಕೆ ಮೀಸಲಾತಿ ಬಹಳ ಸಹಕಾರಿ ಆಗುತ್ತದೆ.
ಒಳ ಮೀಸಲಾತಿ ನೀಡುವುದರ ಹಿಂದಿನ ಉದ್ದೇಶ ಯಾರಿಗೋ ಅನ್ಯಾಯ ಮಾಡುವುದಲ್ಲ. ಬದಲಿಗೆ ದಮನಿತರ, ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದೇ ಆಗಿರುತ್ತದೆ. ಇಂತಹ ಉದ್ದೇಶಕ್ಕೆ ಯಾವುದೇ ಅಡೆ ತಡೆ ಸಂವಿಧಾನದಿಂದ ಇರಲು ಸಾಧ್ಯವಿಲ್ಲ. ಇದನ್ನು ಇಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸಾಬೀತು ಮಾಡಿದೆ ಎಂದರು.