Kampli : ಶ್ರಾವಣ ಸೋಮವಾರದ ಪ್ರಯುಕ್ತ ಪಂಪಾಪತಿ ಸ್ವಾಮಿಗೆ ವಿಶೇಷ ಪೂಜೆ


ಶ್ರಾವಣ ಸೋಮವಾರದ ಪ್ರಯುಕ್ತ ಪಂಪಾಪತಿ ಸ್ವಾಮಿಗೆ ವಿಶೇಷ ಪೂಜೆ

ಕಂಪ್ಲಿ : ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ ಐತಿಹಾಸಿಕ ದೇವಲಯ ಕೋಟೆಯ ಶ್ರೀ ಪಂಪಾಪತಿ ದೇವರಿಗೆ ಇಂದು ಶ್ರಾವಣ ಸೋಮವಾರ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.

ಇನ್ನು ದೇವರ ಮೂರ್ತಿಯನ್ನು ಕಂಪ್ಲಿಯ ತುಂಗಭದ್ರಾ ನದಿಯಲ್ಲಿ ಗಂಗೆ ಸ್ಥಳ ಕಾರ್ಯಕ್ರಮ ಮಾಡಿ, ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.

ಇನ್ನು ಈ ಸಂದರ್ಭದಲ್ಲಿ ಮಾತನಾಡಿದ, ಆರ್ಚಕ ಶರಣ ಸ್ವಾಮಿ ಮಾತನಾಡಿ, ಪ್ರತಿ ಶ್ರಾವಣ ಸೋಮವಾರದಂದು ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ ಜರಗುವುದು ಹಾಗೂ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ಹೇಳಿದರು.

ನಗರದ ಪುರಾತನ ಪಂಪಾಪತಿ ದೇವಾಲಯದಲ್ಲಿ ಭಕ್ತರು ತೆಂಗಿನಕಾಯಿ ಒಡೆದು ದೇವರಿಗೆ ಬಿಲ್ವಪತ್ರೆ ಹಾಗೂ ಪುಷ್ಪ ಅರ್ಪಿಸಿ ಪೂಜೆ ಸಲ್ಲಿಸುವ ಮೂಲಕ ಶ್ರಾವಣ ಮಾಸದ ಮೋದಲನೇ ಸೋಮವಾರವನ್ನು ಭಕ್ತಿಯಿಂದ ಆಚರಿಸಿದರು.

ರಘುವೀರ್, ಸಿದ್ದಿ ಟಿವಿ, ಕಂಪ್ಲಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">