ಸೇತುವೆ ಮೇಲೆ ಬೈಕ್ ನಿಲ್ಲಿಸಿ ಹೋದ ಬೈಕ್ ಸವಾರ
ಕಂಪ್ಲಿ : ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮೇಲೆ ಕೇವಲ ಪಾದಚಾರಿಗಳಿಗೆ ಮಾತ್ರ ಸಂಚರಿಸಲು ಅವಕಾಶವನ್ನು ಲೋಕೋಪಯೋಗಿ ಇಲಾಖೆ ನಿನ್ನೆಯಿಂದ ನೀಡಿದೆ.
ಆದ್ರೇ ಇಂದು ಬೈಕ್ ಸವಾರನೊಬ್ಬ ಚಿಕ್ಕಜಂತಕಲ್ ನಿಂದ ಕೋಟೆಯವರೆಗೂ ಸೇತುವೆ ಮೇಲೆ ಬೈಕ್ ಚಲಾಯಿಸಿಕೊಂಡು ಬಂದಿದ್ದಾನೆ, ಬೈಕ್ ನಿಲ್ಲಿಸಿ ವ್ಯಕ್ತಿಯನ್ನು ತಡೆದು ತರಾಟೆಗೆ ತೆಗೆದುಕೊಂಡ್ರು ಕಂಪ್ಲಿ ಪೋಲಿಸರು.
ಆ ವ್ಯಕ್ತಿಯನ್ನ ಕಂಪ್ಲಿ ಪೊಲೀಸರು ಮನವೊಲಿಸಿದರು ಸಹ ಕ್ಯಾರೇ ಎನ್ನದೇ ಬೈಕ್ ಅನ್ನು ಸೇತುವೆ ಮೇಲೆ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಇನ್ನು ಆ ಬೈಕ್ ಅನ್ನು ಗಂಗಾವತಿ ಗ್ರಾಮೀಣ ಠಾಣೆಗೆ ಸಿಬ್ಬಂದಿಗಳು ಬಿಟ್ಟು ಬರಲು ಮುಂದಾದ್ರು..
ಪೊಲೀಸರಿಗೆ ತಲೆ ನೋವಾದ ಬೈಕ್ ಸವಾರರು :
ಈ ಘಟನೆ ಮುಗಿಯುತ್ತಿದ್ದಂತೆ ಮತ್ತೊಂದು ಬೈಕ್ ಸವಾರನೊಬ್ಬ ಕಂಪ್ಲಿಯಿಂದ ಗಂಗಾವತಿಗೆ ಸೇತುವೆ ಮೇಲೆ ಹೋಗಲು ಯತ್ನಿಸಿದ್ರು, ಆ ಬೈಕ್ ಸವಾರರನ್ನು ಸಹ ತಡೆದು ಮರಳಿ ಹಿಂತಿರುಗಿ ಕಳಿಸಿದ್ದಾರೆ ಕಂಪ್ಲಿ ಪೊಲೀಸರು.
ಜನರ ಹಿತದೃಷ್ಟಿಯಿಂದ ಕಂಪ್ಲಿಯ ಪೊಲೀಸರು ಇಲಾಖೆಯ ಆದೇಶವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದಾರೆ, ಆದರೆ ವಾಹನ ಸವಾರರು ಪೊಲೀಸರು ಆದೇಶವನ್ನು ಪಾಲಿಸುವುದು ಉತ್ತಮ ಎಂಬುದು ಸಿದ್ದಿ ಟಿವಿ ಆಶಯ.