ಕೊಟ್ಟೂರು :
ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೈಕ್ ಕಳ್ಳತನ ದೂರುಗಳು ದಾಖಲಾಗುತ್ತಿರುವುದನ್ನು ಗಮನಿಸಿದ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಇವರ ಮಾರ್ಗದರ್ಶನದಲ್ಲಿ ಟಿ. ವೆಂಕಟಸ್ವಾಮಿ. ಸಿ ಪಿ ಐ ಕೊಟ್ಟೂರು ವೃತ್ತ ಹಾಗೂ ಪಿ ಎಸ್ ಐ ಗೀತಾಂಜಲಿ ಶಿಂಧೆ ಮತ್ತು ಪೊಲೀಸ್ ಸಿಬ್ಬಂದಿಯವರಾದ ಬಸವರಾಜ ಹೆಚ್. ವೀರೇಶ್, ಶಶಿಧರ, ನಾಗಪ್ಪ ಯು.ಹೆಚ್.ಸಿ. ಕೊಟ್ರುಗೌಡ ,ರೇವಣಸಿದ್ದಪ್ಪ ಪೊಲೀಸ್ ರ ತಂಡ ಬೈಕ್ ಕಳ್ಳರ ಪತ್ತೆಗಾಗಿ ರಚಿಸಲಾಗಿತ್ತು.
ಮಲ್ಲೇಶಪ್ಪ ಮಲ್ಲಾಪುರ ಡಿ ವೈ ಎಸ್ಪಿ ಕೂಡ್ಲಿಗಿ ಇವರ ಸಲಹೆಯಂತೆ ಕೊಟ್ಟೂರು ಪೊಲೀಸ್ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಇಂದು ಬೆಳಿಗ್ಗೆ 9.30 ರ ಸುಮಾರಿಗೆ ಹ್ಯಾಳ್ಯಾ ರಸ್ತೆಯ ಪೆಟ್ರೋಲ್ ಬಂಕ್ ನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ದೂಪದಹಳ್ಳಿ ಗ್ರಾಮದ ಕೆ ಸಂತೋಷ ತಂದೆ ಹಾಲಪ್ಪ ಎಂಬ 31 ವರ್ಷದ ವ್ಯಕ್ತಿಯನ್ನು ಬಂಧಿಸಿ ಅವನ ಬಳಿ ಇದ್ದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ 7 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೈಕ್ ಗಳ ಅಂದಾಜು ಮೊತ್ತ : 2 ಲಕ್ಷದ 50 ಸಾವಿರ ಇದೆ ಎಂದು ಟಿ.ವೆಂಕಟಸ್ವಾಮಿ ಸಿ ಪಿ ಐ ಹಾಗೂ ಗೀತಾಂಜಲಿ ಶಿಂಧೆ ಪಿ ಎಸ್ ಐ ಮತ್ತು ಕಾರ್ಯಾಚರಣೆ ನಿರತ ತಂಡ ಪತ್ರಿಕೆ ಪ್ರಕಟಣೆ ನೀಡಿದರು.
ತಂಡದ ಕಾರ್ಯಚರಣೆ ಯಶಸ್ವಿಯನ್ನು ಗಮನಿಸಿದ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಹರಿಬಾಬು ಕೊಟ್ಟೂರು ಪೊಲೀಸ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.