ಸಾವಿನಲ್ಲೂ ಒಂದಾದ ಪ್ರೇಮಿಗಳು
ಸಿರುಗುಪ್ಪ: ನಗರದ ಹೊರವಲಯದಲ್ಲಿ ವಿಷಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ನಗರದ ವಿಜಯನಗರ ಕಾಲೋನಿಯ ಯುವತಿ ಪವಿತ್ರಮ್ಮ (19) ಮತ್ತು ಆಧೋನಿ ರಸ್ತೆಯ 24ನೇವಾರ್ಡ್ನ ಯುವಕ ರಾಜ (24) ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ನಗರದ ಖಾಸಗಿ ಆಯಿಲ್ ಮಿಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ 3-4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆಂದು ಹೇಳಲಾಗುತ್ತಿದ್ದು, ಇಬ್ಬರು ಅನ್ಯ ಜಾತಿಯವರಾಗಿದ್ದರಿಂದ ವಿವಾಹಕ್ಕೆ ಮನೆಯಲ್ಲಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನುವ ಕಾರಣದಿಂದ ಇಬ್ಬರು ಪ್ರೇಮಿಗಳು ಒಟ್ಟಿಗೆ ಸೇರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆAದು ಹೇಳಲಾಗಿದೆ, ಈ ಬಗ್ಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾಜಾಸಾಬ್, ಸಿದ್ದಿ ಟಿವಿ, ಸಿರುಗುಪ್ಪ