ತುಂಗಭದ್ರಾ ಡ್ಯಾಂ ವೀಕ್ಷಣೆಗೆ ಮುಕ್ತಿ
ಈ ಹಿಂದೆ ತುಂಗಭದ್ರಾ ಜಲಾಶಯ 19ನೇ ಕ್ರಸ್ಟ್ ಕಿತ್ತುಹೋಗಿದ್ದರಿಂದ ಕಾನೂನು ಸುರಕ್ಷತೆ ಹಿನ್ನೆಲೆಯಲ್ಲಿ ಪೊಲೀಸರು ಸೆಕ್ಷನ್ 144 ಅನ್ನು ಜಾರಿ ಮಾಡಿದ್ದರು. ಸದ್ಯ ಅಧಿಕಾರಿಗಳು ವಿಧಿಸಲಾಗಿದ್ದ ಸೆಕ್ಷನ್ 144 ವಾಪಸ್ ಪಡೆದುಕೊಂಡಿದ್ದಾರೆ. ಗೇಟ್ ಕುಸಿತದ ಸುದ್ದಿ ಹರಡಿದಾಗ ಜನರು ದೊಡ್ಡ ಸಂಖ್ಯೆಯಲ್ಲಿ ಡ್ಯಾಂ ವೀಕ್ಷಣೆಗೆ ಬರಬಹುದು. ಇದರಿಂದ ಅಪಾಯ ಉಂಟಾಗಬಹುದು ಎಂಬ ಅನುಮಾನದಿಂದ ಜಲಾಶಯದ ಸುತ್ತ ಮುತ್ತ ಸೆಕ್ಷನ್ 144 ಜಾರಿ ಮಾಡಿದ್ದರು. ಆಗಸ್ಟ್ 12ರಿಂದ ನಿರ್ಬಂಧ ಹೇರಿ ಆದೇಶಿಸಿದ್ದ ವಿಜಯನಗರ ಜಿಲ್ಲಾಡಳಿತ ಗೇಟ್ ದುರಸ್ತಿ ಆದ ಬೆನ್ನಲ್ಲೇ ಸೆಕ್ಷನ್ 144 ವಾಪಸ್ ಪಡೆದುಕೊಂಡಿದೆ. ಇದೀಗ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಳಿಸಿದೆ.