ತುಂಗಭದ್ರಾ ಡ್ಯಾಂ ನೀರಿನ ಮಟ್ಟದಲ್ಲಿ ಭಾರೀ ಇಳಿಕೆ
ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಇಂದಿಗೆ ಆರು ದಿನಗಳು ಕಳೆದು ಹೋಗಿವೆ. ಹೀಗಾಗಿ ಅಧಿಕಾರಿಗಳಿಂದ ತಾತ್ಕಾಲಿಕ ಗೇಟ್ ಕೂರಿಸುವ ಕಾರ್ಯ ಭರದಿಂದ ಸಾಗಿದೆ. ಇದರ ಮಧ್ಯೆ ಜಲಾಶಯದ ನೀರಿನ ಮಟ್ಟವು ಕಡಿಮೆಯಾಗಿದೆ. ಆಗಸ್ಟ್ 11ರಿಂದ ನದಿಗೆ ನೀರು ಬಿಡಲಾಗುತ್ತಿದೆ. 1633 ಅಡಿ ಎತ್ತರವಿರುವ ಜಲಾಶಯದಲ್ಲಿನ ನೀರು 1623.79 ಅಡಿಗೆ ಇಳಿಕೆ ಕಂಡಿದೆ. ಅಂದರೆ ಡ್ಯಾಂ ಡ್ಯಾಮೇಜ್ ಆದ ಅನಾಹುತದಿಂದಾಗಿ 9 ಅಡಿ ನೀರು ಇಳಿಕೆ ಆಗಿದೆ.
ಜಲಾಶಯಕ್ಕೆ 35,437 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದಿಂದ ಒಟ್ಟು 86 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗ್ತಿದೆ. ಈಗಾಗಲೆ ಟಿಬಿ ಬೋರ್ಡ್ ಹೊರ ಹರಿವು ಕಡಿಮೆ ಮಾಡಿದೆ. 33 ಕ್ರಸ್ಟ್ ಗೇಟ್ಗಳ ಪೈಕಿ 25 ಗೇಟ್ ಮೂಲಕ ನೀರು ರಿಲೀಸ್ ಮಾಡಲಾಗಿದೆ. ಇಂದು ಟಿಬಿ ಬೋರ್ಡ್ ಮತ್ತೇ ನಾಲ್ಕು ಗೇಟ್ ಕ್ಲೋಸ್ ಮಾಡಿದೆ. 25 ಗೇಟ್ಗಳಿಂದ 86 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿ ಬಿಡಲಾಗಿದೆ.
ನಿನ್ನೆಯವರೆಗೂ 1.20 ಲಕ್ಷ ಕ್ಯೂಸೆಕ್ ನೀರು ಜಲಾಶಯದಿಂದ ನದಿಗೆ ಬಿಡಲಾಗಿದೆ. ಈಗಾಗಲೇ ಜಲಾಶಯದಿಂದ 40 ಟಿಎಂಸಿ ನೀರು ಹರಿದು ನದಿಗೆ ಹೋಗಿದೆ. ಜಲಾಶಯದಲ್ಲಿ ಸದ್ಯ 65 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದ ಮೊದಲ ಸ್ಟಾಪ್ ಲಾಗ್ ಗೇಟ್ ಕೂರಿಸುವ ಕಾರ್ಯ ಆರಂಭವಾಗಿದೆ. ಇಂದು ಸಂಜೆ ವೇಳೆಗೆ ಗೇಟ್ ಕೂರಿಸುವ ಕಾರ್ಯ ಬಹುತೇಕ ಮುಕ್ತಾಯ ಆಗುವ ಸಾಧ್ಯತೆ ಇದೆ.
Tags
ಟಾಪ್ ನ್ಯೂಸ್