ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ
ಗಂಗಾವತಿ :
ದ್ವಿತೀಯ ಹಾಗೂ ತೃತೀಯ ವರ್ಷದ ಕಾನೂನು ವಿದ್ಯಾರ್ಥಿಗಳ ಕಾಲೇಜು ಶುಲ್ಕ ಹೆಚ್ಚಳ ವಿರುದ್ಧ ಪ್ರತಿಭಟನೆ.
ಗಂಗಾವತಿಯ ಶ್ರೀ ಅಫ್ಘಾನಿ ಎನ್.ಆರ್. ಕಾನೂನು ಮಹಾವಿದ್ಯಾಲಯ ಆಡಳಿತ ಮಂಡಳಿಯ ಹಾಗೂ ಪ್ರಾಂಶುಪಾಲರು ವಿರುದ್ಧ ಅಫ್ಘಾನಿ ಕಾನೂನು ಮಹಾವಿದ್ಯಾಲಯ ದಿಂದ 2024- 25 ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಮತ್ತು ತೃತೀಯ ವರ್ಷದ ಕಾನೂನು ವಿದ್ಯಾರ್ಥಿಗಳ ಕಾಲೇಜು ಶುಲ್ಕ ಕಳೆದ ವರ್ಷಕ್ಕಿಂತ ಶುಲ್ಕ ಹೆಚ್ಚಳವಾಗಿದ್ದು,
ಪ್ರಸ್ತುತ ವರ್ಷವೂ 10 ಪಟ್ಟು ಶುಲ್ಕವನ್ನು ಹೆಚ್ಚಿಸಿರುವುದು ಖಂಡನಿಯ, ಗ್ರಾಮೀಣ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಕರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು,ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿ ವೇತನವು ಸಹ ಸಿಗುತ್ತಿಲ್ಲ, ಶುಲ್ಕದಿಂದ ಹೆಚ್ಚುತ್ತಿರುವುದನ್ನು ನೋಡಿ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.ಶುಲ್ಕ ಹೆಚ್ಚಳದಿಂದ ಪ್ರವೇಶ ಪಡೆಯಲೂ ನಿರಾಕರಿಸಿದ್ದಾರೆ. ಎಂದು ಯುವ ಉತ್ತೇಜನ ಸೇನಾ ಪಡೆಯ ಜಿಲ್ಲಾಧ್ಯಕ್ಷರು ಸರ್ವಜ್ಞಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲೇ ಶಿಕ್ಷಣ ಕುಂಠಿತವಾಗುತ್ತಿದ್ದು, ಅದರಲ್ಲೂ ಕಾನೂನು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ತುಂಬಾ ಸಂಖ್ಯೆ ಕಡಿಮೆಯಾಗಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದ ಶುಲ್ಕ ಸಮಸ್ಯೆಗೆ ಈಡಾಗಿದ್ದಾರೆ, ಕೂಡಲೇ ಪ್ರಸ್ತುತ ವರ್ಷದ ಶುಲ್ಕವನ್ನು ಕಡಿತಗೊಳಿಸಿ ಶುಲ್ಕವನ್ನು ಕಟ್ಟಲು ಕಂತುಗಳ ರೂಪದಲ್ಲಿ ಅವಕಾಶ ಕಲ್ಪಿಸಿ, ಅವಧಿಯು ಕಡಿಮೆ ಇರುವುದರಿಂದ ಗೌರವಾನ್ವಿತ ಆಡಳಿತ ಮಂಡಳಿಯು ಸಮಸ್ಯೆಯನ್ನು ನಿವಾರಿಸಬೇಕು ಎಂದು ಸಂಘಟನೆಯು ಆಗ್ರಹಿಸಿದರು.
ಈ ಸಮಸ್ಯೆಯು ಬಗೆಹರಿಯದೆ ಹೋದಲ್ಲಿ ಯುವ ಉತ್ತೇಜನ ಸೇನಾಪಡೆ ಸಂಘಟನೆಯು ಉಗ್ರ ಹೋರಾಟ ಮಾಡುವುದಾಗಿ ಗೌರವಾನ್ವಿತ ರಾಜ್ಯಪಾಲರು, ರಾಜ್ಯಪಾಲರ ಭವನ, ಕರ್ನಾಟಕ ಸರ್ಕಾರ ಬೆಂಗಳೂರು, ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು, ಉಪಕುಲಪತಿಗಳು ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇವರಿಗೆ ಮನವಿ ಮಾಡುವ ಮೂಲಕ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೌಸ್ತುಬ್ ದಂಡಿನ್, ಅಯ್ಯನ ಗೌಡ, ಮತ್ತು ಕಾಲೇಜು ವಿದ್ಯಾರ್ಥಿಗಳಾದ ವಿನೋದ್, ಕಾರ್ತಿಕ್, ಕನಕರಾಜ್. ಭೀಮೇಶ್, ನಜ್ಮಾ ತನಕೇಶ್, ಬಸವರಾಜ್, ಅನಿಲ್ ಕುಮಾರ್, ಹನುಮಂತಪ್ಪ, ಸೇರಿದಂತೆ ಅನೇಕ ಉಪಸ್ಥಿತರಿದ್ದರು.