Kampli : ಪೌರಕಾರ್ಮಿಕರ ದಿನಾಚರಣೆ-Siddi TV


ಕಂಪ್ಲಿ : ನಗರದ ಪುರಸಭೆ ಕಾರ್ಯಲಯದ ಆವರಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಹಾಗೂ ಪೌರ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕೆ.ದುರ್ಗಣ್ಣ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮ ಚಾಲನೆ ನೀಡಿದ್ರು..

ಪಟ್ಟಣದ ಶ್ರೀ ಉದ್ಭವ ಗಣಪತಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಡಿಜೆ ಮೂಲಕ ಸಂಚಾರಿಸಿ ಪುರಸಭೆ ಕಾರ್ಯಲಯದಲ್ಲಿ ಸಮಾವೇಶಗೊಂಡಿತು.

ಇನ್ನು ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸಿಗಬೇಕಾದ ನಿವೇಶನದ ಕುರಿತು ಮಾತನಾಡಿ, ಶೀಘ್ರದಲ್ಲೇ ನಿಮ್ಮ ಬೇಡಿಕೆಯನ್ನು ಈಡೇರಿಸುವ ಕಾರ್ಯ ಮಾಡುತ್ತೆವೆ ಎಂದರು.

ಪೌರಕಾರ್ಮಿಕರು ಡಿಜೆ ಸದ್ದಿಗೆ ಭರ್ಜರಿ ಸ್ಟೇಪ್ಸ್ ಹಾಕಿದ್ದಾರೆ


ಈ ಸ್ಟೋರಿ ಓದಿ/ನೋಡಿ

ಸಾಮಾಜಿಕ ವೈದ್ಯರಿಗೊಂದು ಸಲಾಂ

ಮಳೆ, ಚಳಿ, ಬಿಸಿಲು ಏನೇ ಇರಲಿ ಅಥವಾ ಕೊರೊನಾದಂತಹ ದೊಡ್ಡ ದೊಡ್ಡ ಸಾಂಕ್ರಾಮಿಕ ರೋಗಗಳೇ ಬರಲಿ ಇವರು ಮಾತ್ರ ತಮ್ಮ ಕೆಲಸ ನಿಲ್ಲಿಸುವುದಿಲ್ಲ.. ಮನೆಯೊಳಗೆ ಬೆಚ್ಚಗೆ ಮಲಗುವುದಿಲ್ಲ..ಅದೆಂತಹದ್ದೇ ಪರಿಸ್ಥಿತಿಯಿರಲಿ ಕೈಯಲ್ಲಿ ಪೊರಕೆ ಹಿಡಿದು ರಸ್ತೆಗೆ ಇಳಿಯುತ್ತಾರೆ. ಒಂದು ದಿನ ಇವರ್‍ಯಾರೂ ಕೆಲಸ ಮಾಡದಿದ್ದರೇ, ಬೀದಿಗಿಳಿಯದಿದ್ದರೇ ನಾವ್ಯಾರೂ ರಸ್ತೆಗಳಲ್ಲಿ, ಮಾರ್ಕೆಟ್‌ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಓಡಾಡಲು ಸಾಧ್ಯವೇ ಇಲ್ಲ. 

ಹೌದು ಇವರೇ ನಮ್ಮ ನಗರಗಳನ್ನು ಸ್ವಚ್ಛಗೊಳಿಸಿ ನಮಗಾಗಿ ತಮ್ಮ ಸುರಕ್ಷತೆಯನ್ನೂ ಬದಿಗಿಟ್ಟ ಪೌರಕಾರ್ಮಿಕರು. ಯೆಸ್ ಇವರೇ ಸಾಮಾಜಿಕ ವೈದ್ಯರು.

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಕಂಪ್ಲಿಯ ಸೇತುವೆ ಮುಳುಗಿತು, ನೀರಲ್ಲಿ ಕಸ, ತ್ಯಾಜ್ಯ ವಸ್ತುಗಳು ಸೇತುವೆಗೆ ಬಂದು ಅಡ್ಡಲಾಗಿ ಕುಳಿತಿತು, ಸಾಂಕ್ರಾಮಿಕ ರೋಗದ ಲಕ್ಷಣಗಳು ಇನ್ನೇನು ಹರಡೋ ಪ್ರಾರಂಭದಲ್ಲೇ ಕಂಪ್ಲಿಯ ಪುರಸಭೆ ಸಿಬ್ಬಂದಿಗಳು ಅಂದ್ರೇ ಪೌರಕಾರ್ಮಿಕರು ತಮ್ಮ ಜೀವವನ್ನು ಲೆಕ್ಕಿಸದೇ ಸ್ವಚ್ಚತಾ ಕಾರ್ಯಕ್ಕೆ ಮುಂದಾದ್ರು.

*ಈ ಪೌರಕಾರ್ಮಿಕರ ಬಗ್ಗೆ ನಿಮಗೇಷ್ಟು ಗೊತ್ತು..??*

ನಮ್ಮ ನಗರಗಳು, ನಮ್ಮ ಮನೆಯ ಬೀದಿಗಳು, ನಾವು ಓಡಾಡುವ ಸ್ಥಳಗಳು ಸ್ವಚ್ಛವಾಗಿರಲು ಇವರೇ ಪ್ರಮುಖ ಕಾರಣಕರ್ತರು.ಅಷ್ಟೇ ಯಾಕೇ ನೀವೆಲ್ಲಾ ಸಂಚರಿಸೋ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆಗೆ ಕಸ ಅಡ್ಡಲಾಗಿ ಕುಳಿತಾಗ ಸರಿಯಾದ ಸಮಯಕ್ಕೆ ಬಂದು ಕಸವನ್ನು ತೆಗೆದು ಹಾಕದಿದ್ರೆ ಸೇತುವೆಯ ರಕ್ಷಣಾ ಕಂಬಿಗಳು ಮುರಿದು ಬೀಳೋದು ಅಕ್ಷರಶಃ ಸತ್ಯ ಒಂದೆಡೆ ನೋಡೊದಾದ್ರೆ ಸೇತುವೆಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ಕಂಪ್ಲಿಯ ಪೌರಕಾರ್ಮಿಕರದ್ದೇ ಆಗಿರುತ್ತೆ.

ಅಷ್ಟೇ ಅಲ್ಲ, ನಾವು ಗಣೇಶ ಹಬ್ಬ, ದೀಪಾವಳಿ ಮಾಡಿ ರಸ್ತೆಗಳಲ್ಲಿ ಕಸ ಎಸೆದು ಮನೆಗೆ ಹೋಗುತ್ತೆವೆ. ಬೆಳಗ್ಗೆ ಆ ಕಸ ಕಾಣಿಸುವುದಿಲ್ಲ ಎಂದರೇ ಅದಕ್ಕೆ ಇವರೆ ಕಾರಣ. ನಾವು ಕೆಲಸಕ್ಕೆ ಹೋಗುತ್ತೇವೆ, ನಮಗೆ ವಾರದ ರಜೆ, ಹಬ್ಬಗಳ ರಜೆ ಎಂಬ ಸವಲತ್ತುಗಳು ಇವೆ ಅಲ್ಲವೇ? ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆಯಾದ್ರೂ ಇರುತ್ತೆ ಅಲ್ಲವೇ.. ಆದ್ರೆ ವಿಪರ್ಯಾಸ ನೋಡಿ ಇವರ್‍ಯಾರಿಗೂ ರಜೆ ಎಂಬುದೇ ಇಲ್ಲ..ರಜೆ ಬೇಕಿದ್ದರೇ ಸಂಬಳ ಕೇಳೋ ಹಾಗಿಲ್ಲ ಅಷ್ಟೆ..

*ಪೌರಕಾರ್ಮಿಕರ ಪರಿಸ್ಥಿತಿ ಹೇಗಿರುತ್ತೇ ಗೊತ್ತಿದ್ಯಾ..?*

ಬೆಳಗ್ಗೆ 5-6 ಗಂಟೆಗೆ ಕೆಲಸಕ್ಕೆ ಹಾಜರಾಗುವ ಇವರಿಗೆ ಕುಡಿಯಲು ನೀರು, ಬಳಸಲು ಶೌಚಾಲಯ, ಬಟ್ಟೆ ಬದಲಿಸಲು ಒಂದು ಪುಟ್ಟ ಕೊಠಡಿ ಸಹ ಇರಲ್ಲ. ಅದರಲ್ಲೂ ಮಹಿಳಾ ಪೌರಕಾರ್ಮಿಕರ ಪರಿಸ್ಥಿತಿ ಊಹಿಸಲಸಾಧ್ಯ..

ನಗರದ ಆಸ್ವಚ್ಚತೆಯನ್ನು ಕ್ಷಣಾರ್ಧದಲ್ಲಿ ಶುದ್ದೀಕರಿಸುವ ಸಾಮಾಜಿಕ ವೈದ್ಯರಿಗೆ ಗೌರವ ನಮನ ಹಾಗೂ ಸಮಾಜಕ್ಕೆ ಅಗತ್ಯವಿರುವ ಇವರಿಗೆ ಅತ್ಯಗತ್ಯ ಸೌಲಭ್ಯ, ಸೌಕರ್ಯಗಳನ್ನು ಸರ್ಕಾರ ನೀಡಲಿ ಎಂಬುದು ಸಿದ್ದಿ ಟಿವಿಯ ಒತ್ತಾಯ.

ರಘುವೀರ್, ಸಿದ್ದಿ ಟಿವಿ, ಕಂಪ್ಲಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">