Kampli : ವಿದ್ಯುತ್ ತಂತಿ ತಗುಲಿ ಯುವಕ ಮೃತ : ಸಂಭ್ರಮದ ಸ್ಥಳದಲ್ಲಿ ಸಾವಿನ ಸೂತಕ

ವಿದ್ಯುತ್ ತಂತಿ ತಗುಲಿ ಯುವಕ ಮೃತ

ಕಂಪ್ಲಿ : ನಗರದ ಹೈಸ್ಕೂಲ್ ಬಳಿ ಯುವಕರೆಲ್ಲರೂ ಸೇರಿ ನಿನ್ನೆಯಷ್ಟೇ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮದಲ್ಲಿದ್ದರು,ನಿನ್ನೆ ರಾತ್ರಿ ಲೈಟ್ಸ್ ಗಳನ್ನ ಸರಿಪಡಿಸಲು ಆ ಯುವಕ ವಿದ್ಯುತ್ ತಂತಿಗೆ ಕೈ ಹಾಕಿದ್ದ, ದುರದೃಷ್ಟವಶಾತ್ ವಿದ್ಯುತ್ ತಗುಲಿ ಸ್ಥಳದಲ್ಲೇ ಕೊನೆ ಉಸಿರೇಳೆದಿದ್ದಾನೆ.

ಯುವಕನ ಹೆಸರು ಭಾಷಾ ಆದ್ರೇ ಇತ್ತಿಚೆಗೆ ಡಿಜೆ ಅಶೋಕ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ, ಮೂಲತಃ ಕಂಪ್ಲಿ ತಾಲೂಕಿನ ಬೆಳಗೋಡ ಗ್ರಾಮದವರು, ಒಂದು ವರ್ಷದ ಹಿಂದೆ ಮದುವೆಯಾಗಿದ್ದ, ಸದ್ಯ ಭಾಷಾ ನ ಹೆಂಡತಿ 8ತಿಂಗಳ ಗರ್ಭಿಣಿ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಸಂಭ್ರಮ ಸ್ಥಳದಲ್ಲಿ ಈಗ ಸಾವಿನ ಸೂತಕದ ವಾತಾವರಣ  ನಿರ್ಮಾಣವಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ಯುವಕನ ಕುಟುಂಬಕ್ಕೆ ಜೆಸ್ಕಾಂ ವತಿಯಿಂದ ಪರಿಹಾರ ನೀಡಿಲಿ ಎಂದು ಗ್ರಾಮಸ್ಥರ ಆಗ್ರಹ

ಸಿದ್ದಿ ಟಿವಿಯೊಂದಿಗೆ ಮಾತನಾಡಿದ ಕೆಇಬಿ ಅಧಿಕಾರಿಗಳು, ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇವೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಹ ಇಂದು ಭೇಟಿ ನೀಡಲಿದ್ದಾರೆ ಹಾಗೂ ಪರಿಹಾರ ಅಥವಾ ಸಹಾಯ ಧನ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

ವೀಕ್ಷಕರೇ, ಏನೇ ಇರಲಿ, ಹಬ್ಬದ ಸಂಭ್ರಮದಲ್ಲಿ ಜಾಗರೂಕತೆಯಿಂದ ಇರಬೇಕು, ನಿಮ್ಮ ನಂಬಿಕೆಯಲ್ಲಿ ಕುಟುಂಬ ಎದುರು ನೋಡುತ್ತಿರುತ್ತೆ.

ಹಬ್ಬ ಆಚರಿಸಿ ಆದ್ರೇ ಜಾಗೃತವಾಗಿರಿ ಎಂಬುದು ನಮ್ಮ ಮನವಿಯೂ ಹೌದು..

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">