ವಿವಿಧ ಬೇಡಿಕೆಗಳ ಈಡೇರಿಕೆಗೆ ಪತ್ರ ಚಳುವಳಿ
ಕಂಪ್ಲಿ ಪಟ್ಟಣದ ಎಸ್.ಎನ್.ಪೇಟೆ ಶಾಲೆಯ ಅವಾವರಣದಲ್ಲಿ ಕಂಪ್ಲಿ-ಕರ್ನಾಟಕ ರಾಜ್ಶ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದ ವತಿಯಿಂದ ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ನೇರವಾಗಿ ಗೌರವಾನ್ವಿತ ಮುಖ್ಶಮಂತ್ರಿಗಳಿಗೆ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾಧ್ಶಕ್ಷರಾದ ಎಚ್.ಮಲ್ಲೇಶ್ ರವರು ಮಾತನಾಡಿ ಅತಿಥಿ ಶಿಕ್ಷಕರ ಪ್ರಮುಖ ಬೇಡಿಕೆಗಳಾದ *ಗೌರವಧನ ಹೆಚ್ಚಳ ಮಾಡುವುದು.
ಪ್ರತಿ ವರ್ಷದ ಸೇವೆಗೆ ಶೇ 5 ಅಂಕ ಕೃಪಾಂಕ ನೀಡುವುದು,ಸೇವೆ ಆಧಾರದ ಮೇಲೆ ಮೊದಲು ಮಾಡಿದವರಿಗೆ ಮೊದಲ ಆದ್ಶತೆ ನೀಡುವುದು,ಪ್ರತಿ ವರ್ಷ ಸೇವಾ ಪ್ರಮಾಣ ಪತ್ರವನ್ನು ನೀಡುವುದಕ್ಕೆ ಒತ್ತಾಯಿಸಿದರು
ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಕುರುಗೋಡು-ಕಂಪ್ಲಿ ತಾಲೂಕ ಅತಿಥಿ ಶಿಕ್ಷಕರ ಅಧ್ಶಕ್ಷರುಗಳಾದ ಶಿವರುದ್ರ, ರಾಮಪ್ಪ ಶಿಕ್ಷಕರಾದ ಉಮೇಶ್, ಬಸವರಾಜ, ಶ್ರೀನಿವಾಸ, ಶೇಕಣ್ಣ, ಮಲ್ಲಿಕಾ, ಪಂಪಾಪತಿ,ಮಮತ, ರಾಜೇವ್ವರಿ, ಶಂಕ್ರಮ್ಮ, ಶೇಕಮ್ಮ ಸೇರಿದಂತೆ ಅನೇಕ ಉಪಸ್ಥಿತರಿದ್ದರು.