ಸೊಸೈಟಿಯ ನೂತನ ಅಧ್ಯಕ್ಷರಾಗಿ ಕೆ.ಭಾಸ್ಕರ್‌ರೆಡ್ಡಿ, ಉಪಾಧ್ಯಕ್ಷರಾಗಿ ಟಿ.ಎಂ.ಸಾವಿತ್ರಿ ಆಯ್ಕೆ
ಕಂಪ್ಲಿ: ಕಂಪ್ಲಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ (ಟಿಎಪಿಸಿಎಂಎಸ್)ಸOಘದ ನೂತನ ಅಧ್ಯಕ್ಷರಾಗಿ ಕೆ.ಭಾಸ್ಕರ್‌ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಟಿ.ಎಂ.ಸಾವಿತ್ರಿ ಅವರು ಆಯ್ಕೆಗೊಂಡರು.
ಇಲ್ಲಿನ ಸಹಕಾರ ಸಂಘದ ಕಛೇರಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಾಧಿಕಾರಿ ಟಿ.ದುರುಗಪ್ಪ ನೇತೃತ್ವದಲ್ಲಿ ಚುನಾವಣೆ ಜರುಗಿತು. ಈ ಚುನಾವಣಾ ಕಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಭಾಸ್ಕರ್‌ರೆಡ್ಡಿ ಹಾಗೂ ಪ್ರತಿ ಸ್ಪರ್ಧಿಯಾಗಿ ವಿ.ಪ್ರಸಾದ್‌ರಾವ್ ಅವರು ಕಣದಲ್ಲಿದ್ದರು. ಮತ್ತು ಉಪಾಧ್ಯಕ್ಷ ಸ್ಥಾನದಲ್ಲಿ ಟಿ.ಎಂ.ಸಾವಿತ್ರಿ ಮತ್ತು ಸಂಗಟಿ ಮಾರೇಶ ಅವರು ಚುನಾವಣೆಗೆ ದುಮ್ಮಿಕ್ಕಿದರು. 13 ಜನ ನಿರ್ದೇಶಕರು, 1 ಸರ್ಕಾರಿ ಪ್ರತಿನಿಧಿ ಹಾಗೂ 1 ಎಆರ್‌ಇಎಸ್ ಸೇರಿದಂತೆ ಒಟ್ಟು 15 ಜನರನ್ನೊಳಗೊಂಡಿತ್ತು. ನಂತರ ಚುನಾವಣೆ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯಲ್ಲಿ ತದನಂತರದ ಫಲಿತಾಂಶದಲ್ಲಿ ವಿ.ಪ್ರಸಾದ್‌ರಾವ್ ಅವರು 5 ಮತಗಳನ್ನು ಪಡೆದು ಸೋಲೊಪ್ಪಿಕೊಂಡರೆ, ಪ್ರತಿ ಸ್ಪರ್ಧಿ ಕೆ.ಭಾಸ್ಕರ್‌ರೆಡ್ಡಿ ಅವರು 10 ಮತಗಳೊಂದಿಗೆ 5 ಮತಗಳ ಅಂತರದಲ್ಲಿ ಜಯಭೇರಿ ಭಾರಿಸಿ ನೂತನ ಅಧ್ಯಕ್ಷರಾಗಿ ಹೊರ ಹೊಮ್ಮಿದರು. ಹಾಗೂ ಟಿ.ಎಂ.ಸಾವಿತ್ರಿ ಅವರು 10 ಮತಗಳನ್ನು ಪಡೆದು ಜಯಶಾಲಿಯಾಗುವ ಮೂಲಕ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದರು. ಸಂಗಟಿ ಮಾರೇಶ ಅವರು ಬರೀ 5 ಮತಗಳೊಂದಿಗೆ ಪರಾಭವಗೊಂಡರು. ಒಟ್ನಲ್ಲಿ ಜಿದ್ದಾಜಿದ್ದಿನಿಂದ ಜರುಗಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ತೆರೆ ಬಿದ್ದಿದೆ.
ಈ ಚುನಾವಣೆ ವೇಳೆ ಮುಖ್ಯಕಾರ್ಯನಿರ್ವಾಹಕ ಕೆ.ವಿರೇಶ, ನಿದೇರ್ಶಕರಾದ ಎನ್.ಆಂಜಿನೇಯ, ಬಿ.ರಮೇಶ್, ಮಂಜುನಾಥ್ ಗುಬಾಜಿ, ಎಸ್.ಜಯಲಕ್ಷಿö್ಮ, ಎಚ್.ಎಂ.ಪ್ರಭುಸ್ವಾಮಿ, ಕೆ.ವಿರೂಪಾಕ್ಷಪ್ಪ, ಕೆ.ಭೀಮಲಿಂಗಪ್ಪ ವಿ.ವೆಂಕಟರಾಮಯ್ಯ, ಟಿ.ಪ್ರಭಾಕರ್, ಎಚ್.ಲಿಂಗಪ್ಪ(ಸರ್ಕಾರಿ ಪ್ರತಿನಿಧಿ) ಇದ್ದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಗೆ ಮಾರ್ಲಾಪಣೆ ಮಾಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರು, ಸಿಬ್ಬಂದಿ ಪಾಲ್ಗೊಂಡಿದ್ದರು.