ಗಾಂಜಾ ಗಮ್ಮತ್ತಿನ್ನಲ್ಲಿ ಪೊಲೀಸರ ಮೇಲೆ ಹಲ್ಲೆ
ಗಂಗಾವತಿ : ದಾಸನಾಳ ಗ್ರಾಮದ ಕೊಪ್ಪಳ ರಾಯಚೂರು ಹೆದ್ದಾರಿಯಲ್ಲಿ ಗಾಂಜಾ ಸೇವನೆ ಮಾಡಿ ಕೊಪ್ಪಳ ಕಡೆಯಿಂದ ವಿಲ್ಲಿಂಗ್ ಮಾಡುತ್ತಿದ್ದ ಯುವಕರನ್ನು ಕಂಡ ಪೊಲೀಸರು ಬುದ್ಧಿ ಹೇಳಲು ಹೋಗಿದ್ದೆ ಈ ದುರ್ಘಟನೆ ನಡೆದಿದೆ,
ಗ್ರಾಮೀಣ ಠಾಣೆಯ ಪಿ ಎಸ್ ಐ ಪುಂಡಪ್ಪ, ಮುಖ್ಯ ಪೇದೆ ಮೀಸೆ ಬಸವರಾಜ್ ಹಾಗು ಪೊಲೀಸ್ ವಾಹನದ ಡ್ರೈವರ್ ಕನಕಪ್ಪ ಇವರು ಹೇಮಗುಡ್ಡ ದಸರಾ ಡ್ಯೂಟಿ ಮುಗಿಸಿಕೊಂಡು ಗಂಗಾವತಿಗೆ ಆಗಮಿಸುತ್ತಿದ್ದಾಗ ಕೊಪ್ಪಳದ ಕಡೆಯಿಂದ ಗುಂಡಮ್ಮ ಕ್ಯಾಂಪಿನ ಅರ್ಬಾಜ್ ಎಂಬ ಯುವಕರ ಪಡೆ ವಿಲಿಂಗ್ ಮಾಡಿಕೊಂಡು ಪೊಲೀಸರ ವಾಹನ ಓವರ್ ಟೇಕ್ ಮಾಡಿಕೊಂಡು ಮುಂದೆ ಹೋಗಿ ಸ್ಕಿಡ್ ಆಗಿ ಬಿದ್ದಿದ್ದಕ್ಕೆ ಪೊಲೀಸರು ತಕ್ಷಣ ಅವರನ್ನು ರಕ್ಷಣೆಗೆ ಧಾವಿಸಿದ್ದಾರೆ ರಕ್ಷಣೆಗೆ ಬಂದ ಪೊಲೀಸರು ಬುದ್ಧಿ ಹೇಳಲು ಮುಂದಾದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗಾಂಜಾ ಮತ್ತಿನಲ್ಲಿದ್ದ ಅರ್ಬಾಜ್ ಮತ್ತು ತಂಡ ಏಕಾ ಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ,
ಸ್ಥಳೀಯರ ರಕ್ಷಣೆಯಿಂದ ಪೊಲೀಸರ ಬಚಾವ್
ಇದನ್ನೆಲ್ಲಾ ಕಂಡ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ ಪೊಲೀಸರು ಜನರ ರಕ್ಷಣೆಗೆ ಇರುವಾಗ ಇಂದು ಜನರೇ ಪೊಲೀಸರ ರಕ್ಷಣೇ ಮಾಡಿ ನಮ್ಮ ಜೀವ ಉಳಿಸಿದ್ದಾರೆ ಎಂದು ಪೊಲೀಸ್ ವಾಹನದ ಡ್ರೈವರ್ ಹಾಗು ಮುಖ್ಯ ಪೇದೆ ಮೀಸೆ ಬಸವರಾಜ್ ಹೇಳಿದ್ದಾರೆ ಮತ್ತು ಸಮವಸ್ತ್ರದಲ್ಲಿ ಇದ್ದ ಪೊಲೀಸರಿಗೆ ರಕ್ಷಣೆ ಇಲ್ಲ ಎಂದಾದಲ್ಲಿ ಇನ್ನು ಸಮವಸ್ತ್ರ ಇಲ್ಲದೆ ಕೆಲಸ ಮಾಡುವ ನಮ್ಮ ಸಿಬ್ಬಂದಿಗೆ ಉಳಿಗಾಲವಿಲ್ಲ ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ
ಗಾಂಜಾ ಸೇವನೆಯಿಂದ ತಮ್ಮ ನಿಯಂತ್ರಣವನ್ನು ಕಳೆದು ಕೊಂಡು ಯುವಕರು ದುರ್ಘಟನೆಗಳಿಗೆ ನಾಂದಿ ಹಾಡುತ್ತಿದ್ದಾರೆ ಸಾರ್ವಜನಿಕರು ಎಷ್ಟೋ ಬಾರಿ ಗಾಂಜಾ ಬಗ್ಗೆ ಪೊಲೀಸರಲ್ಲಿ ದೂರನ್ನು ಕೊಟ್ಟಿದ್ದಾರೆ ಪತ್ರಿಕೆಗಳಲ್ಲಿ ಸಾಕಷ್ಟು ಬಾರಿ ಗಾಂಜಾ ಬಗ್ಗೆ ವರದಿ ಪ್ರಕಟವಾದರು ಗಾಂಜಾ ಮಾರಾಟ ಮಾಡುವವರನ್ನು ಮಟ್ಟ ಹಾಕುವಲ್ಲಿ ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ,
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅರ್ಬಾಜ್, ವೆಂಕಟೇಶ್, ಪಂಪನಗೌಡ,ಮೂರು ಜನ ಆರೋಪಿಗಳು ಪೊಲೀಸರ ವಶಕ್ಕೆ ಸಿಕ್ಕಿದ್ದಾರೆ ಇನ್ನುಳಿದ ಇಬ್ಬರು ತಲೆ ಮರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ,