ಕಂಪ್ಲಿ :
ಕಂಪ್ಲಿ ತಾಲ್ಲೂಕು ಎಮ್ಮಿಗನೂರು ಗ್ರಾಮದ ಎಸ್.ಡಬ್ಲ್ಶೂ.ಎಸ್. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಜೀಯವರ ಜನ್ಮ ದಿನವನ್ನು ಆಚರಿಸಲಾಯಿತು.
ಈ ವೇಳೆ ಸಹಶಿಕ್ಷಕ ಮಲ್ಲೇಶ್ ಮಾತನಾಡಿ ಲಾಲ್ ಬಹದ್ದೂರ್ ಶಾಸ್ತ್ರಿಯವರು 'ಜೈ ಜವಾನ್ ಜೈ ಕಿಸಾನ್ ' ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ, ದೇಶ ಕಂಡ ಅಪರೂಪದ ಪ್ರಧಾನಿ ಎಂದು ತಿಳಿಸಿದರು.
ನಂತರ ಎಸ್.ಡಿ.ಎಂ.ಸಿ. ಸದಸ್ಶರಾದ ಪಕ್ಕೀರಪ್ಪ ಮಾತನಾಡಿ ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿಯವರ ಬದುಕು,ಭೋಧನೆ,ತತ್ವಾದರ್ಶಗಳು ಭಾರತೀಯರ ಹೃದಯದಲ್ಲಿ ಎಂದಿಗೂ ಅಜರಾಮರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಶಕ್ಷರಾದ ಎಚ್.ಎಂ.ಚಂದ್ರಶೇಖರ ಸದಸ್ಶರಾದ ಪಕ್ಕೀರಪ್ಪ ಮುಖ್ಶಗುರುಗಳಾದ ಮಂಜಪ್ಪ ಹೂಗಾರ,ಸಹಶಿಕ್ಷಕರಾದ ಜ್ಶೋತಿ, ಸಂಗಮ್ಮ, ಲಕ್ಷ್ಮೀ, ವೀರೇಶ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.