ಕಂಪ್ಲಿ: ಸ್ವತಂತ್ರ ಹೋರಾಟಗಾರ ಅಶ್ಫಾಕುಲ್ಲಾ ಖಾನ್ ರವರ ಜಯಂತಿ ಆಚರಣೆ
ಕಂಪ್ಲಿಯ ಕಿಯೋನಿಕ್ಸ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಶ್ಫಾಕುಲ್ಲಾ ಖಾನ್ ರವರ ಜಯಂತಿಯನ್ನು ಆಚರಿಸಲಾಯಿತು.
ಸ್ವತಂತ್ರ ಹೋರಾಟದಲ್ಲಿ ಇವರ ಪಾತ್ರ ಮಹತ್ವದ್ದು ಹೋರಾಟದ ಪ್ರಮುಖ ಘಟನೆಗಳಲ್ಲಿ ಒಂದಾದ ಕಾಕೋರಿ ಸಂಚು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದು ಅಗಸ್ಟ್ 9, 1925ರಲ್ಲಿ ನಡೆದಂತಹ ಘಟನೆ. ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಅವರ ನೇತೃತ್ವದ ಯೋಜನೆ ಇದಾಗಿತ್ತು. ಭಾರತವನ್ನು ತಮ್ಮ ಆಡಳಿತದ ಅಡಿಯಲ್ಲಿ ಇಟ್ಟುಕೊಂಡು, ನಮ್ಮ ನಾಡಿನ ಹಣವನ್ನು ಲೂಟಿ ಮಾಡುತ್ತಿದ್ದ ಆಂಗ್ಲರ ವಿರುದ್ಧ ಕ್ರಾಂತಿಕಾರಿ ಮಾರ್ಗದಲ್ಲಿ ಹೋರಾಟ ನಡೆಸಬೇಕೆಂದು ನಿರ್ಧರಿಸಿದ್ದವರಲ್ಲಿ ಹಿಂದುಸ್ಥಾನ್ ರಿಪಬ್ಲಿಕನ್ ಆರ್ಮಿಯ ಅಶ್ಫಾಕುಲ್ಲಾ ಖಾನ್ ರವರ ಪಾತ್ರ ಮಹತ್ವದ್ದು ಸದಸ್ಯರು ಪ್ರಮುಖರು.
ಹಣ ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಸಾಧಿಸಲು ಉಪಯೋಗವಾಗಬೇಕು ಎನ್ನುವ ಕ್ರಿಯೆಯಲ್ಲಿ ಪಾಲ್ಗೊಂಡು ಗಲ್ಲುಶಿಕ್ಷೆಗೆ ಗುರಿಯಾಗಿ ಪ್ರಾಣಾರ್ಪಣೆ ಮಾಡಿದ್ದರು. ನಮ್ಮ ನಾಡಿನ ವಿರುದ್ಧವೇ ಆಡಳಿತ ಮಾಡುತ್ತಿದ್ದ ಬ್ರಿಟಿಷರಿಗೆ ನಮ್ಮ ಹಣವನ್ನು ನಮ್ಮದಾಗಿಸಿಕೊಂಡು ಅವುಗಳ ಮೂಲಕ ಬ್ರಿಟಿಷರಿಗೆ ತಕ್ಕ ಉತ್ತರ ನೀಡಬೇಕೆಂಬ ಉತ್ಸಾಹ. ಡಿಸೆಂಬರ್ 19, 1927 ರಲ್ಲಿ ಅಶ್ಫಾಕುಲ್ಲಾ ರವರನ್ನು ಗಲ್ಲಿಗೇರಿಸಲಾಯಿತು.ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಈ ಮಹಾನ್ ಪುರುಷರಿಗೆ ಶತಶತಪ್ರಣಾಮಗಳು
ಇನ್ನು ಈ ಕಾರ್ಯಕ್ರಮದಲ್ಲಿ ಖಬಾರಸ್ಥಾನ ಕಮಿಟಿಯ ಸದಸ್ಯರು ಹಾಗೂ ಡಾ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟನ ಉಪಾಧ್ಯಕ್ಷರಾದ ಬಿ. ರಸುಲ್ ಸ್ಥಾಪಕ ಸಂಚಾಲಕರಾದ ಬಡಿಗೇರ್ ಜಿಲಾನ್ ಸಾಬ್ ಆರ್. ಸುಭಾನ್ ಮೌಲಹುಸೇನ್ ಆರ್. ಜಿಲಾನ ಮಾಳಗಿ ಸಂತೋಷ ಕುಮಾರ ಎಂ ಶಂಕರ ಬ್ರಹ್ಮಾನಂದ ಅಕ್ಕಮಹಾದೇವಿ ಲಕ್ಷ್ಮಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು