ನಾಳೆ ಫೈಲೇರಿಯಾಗೆ ಸಂಭಂಧಿಸಿದಂತೆ ರಕ್ತ ಲೇಪನ ಸಂಗ್ರಹಣಾ ಕಾರ್ಯಕ್ರಮ
ನಾಳೆ ನಡೆಯುವ ಫೈಲೇರಿಯಾ (ಆನೆಕಾಲು ರೋಗ) ಕ್ಕೆ ಸಂಭಂಧಿಸಿದಂತೆ ರಕ್ತ ಲೇಪನ ಸಂಗ್ರಹಣ ಕಾರ್ಯಕ್ರಮದ ಪ್ರಯುಕ್ತ ಕೋಟೆ ಪ್ರದೇಶದಲ್ಲಿನ ಜನ ಸಮುದಾಯಕ್ಕೆ ಪೂರ್ವಭಾವಿಯಾಗಿ ಮನೆ ಮನೆಗಳಿಗೆ ತೆರಳಿ ಫೈಲೇರಿಯಾ ಕಾರ್ಯಕ್ರಮದ ಕುರಿತು ಆಶಾ ಕಾರ್ಯಕರ್ತೆಯರು ಹಾಗೂ ಕ್ಷೇತ್ರ ಸಿಬ್ಬಂದಿಗಳನ್ನೊಳಗೊಂಡಂತೆ ತಂಡವನ್ನು ರಚಿಸಿ ಮಾಹಿತಿಯನ್ನು ನೀಡಲಾಯಿತು.
ಫೈಲೇರಿಯಾ ಕಾರ್ಯಕ್ರಮಕ್ಕೆ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು 1 ಮತ್ತು 13 ನೇ ವಾರ್ಡ್ ನ ಪುರಸಭಾ ಸದಸ್ಯರನ್ನು ಹಾಗೂ ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯರಿಗೆ ಮತ್ತು ಸಂಘ- ಸಂಸ್ಥೆಗಳ ಮುಖಂಡರಿಗೆ ಮನವಿ ಮಾಡಲಾಯಿತು.
ಇನ್ನು ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ಮತ್ತು ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.