ಕಂಪ್ಲಿಯ ವಾಲ್ಮೀಕಿ ವೃತ್ತದ ಬಳಿ ಇರುವ KS ಆರ್ಥೋಪೆಡಿಕ್ ಕ್ಲಿನಿಕ್ ನಲ್ಲಿ ಇಂದು, ನಾರಾಯಣ ಹೆಲ್ತ್ ಕೇರ್ ಬೆಂಗಳೂರು ರವರ ಸಹಯೋಗದಲ್ಲಿ ಉಚಿತ ಮೊಣಕಾಲು ಬದಲಿ ಶಸ್ತ್ರ ಚಿಕಿತ್ಸೆ ತಪಾಸಣಾ ಶಿಬಿರವನ್ನ ಆಯೋಜಿಸಲಾಗಿತ್ತು.
ಡಾಕ್ಟರ್ ಎಚ್ ವಿಶ್ವನಾಥ್ ರವರು ಮಾತನಾಡಿ, ಕಂಪ್ಲಿಯಲ್ಲಿ ಇದೆ ಮೊದಲ ಬಾರಿಗೆ ಉಚಿತ ಮೊಣಕಾಲು ಬದಲಿ ಶಸ್ತ ಚಿಕಿತ್ಸೆ ತಪಾಸಣೆ ಶಿಬಿರವನ್ನು ನಾರಾಯಣ ಹೆಲ್ತ್ ಕೇರ್ ಬೆಂಗಳೂರು ಮತ್ತು ಕೆ ಎಸ್ ಆರ್ಥೋಪೆಟ್ ಕ್ಲಿನಿಕ್ ಸಹಯೋಗದಲ್ಲಿ ನಿರಂತರ ಮೊಣಕಾಲು ನೋವು, ಮೊಣಕಾಲಿನ ಊತ, ಬಿಗಿತ ಮತ್ತು ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ಚಲನೆ, ದೀರ್ಘಕಾಲದ ಮೊಣಕಾಲಿನ ಅಸ್ಥಿರತೆ, ದೀರ್ಘಕಾಲದ ಜಂಟಿ ನೋವು ಹಾಗೂ ತಪಾಸಣೆಗೆ ಒಳಗೊಂಡಂತೆ ಬಿಪಿ, ಆರ್‌ಬಿಎಸ್, ಬಿಎಂಡಿ, ಅರ್ತೋಪೆಡಿಕ್ ಸಮಾಲೋಚನ, ಎಲ್ಲವನ್ನು ಉಚಿತವಾಗಿ ತಪಾಸಣೆ ಮಾಡಲಾಯಿತು ಈ ದಿನ ಶಿಬಿರದಲ್ಲಿ 200 ಕ್ಕೂ ಹೆಚ್ಚು ಜನ ಇದರ ಸದುಪಯೋಗ ಪಡೆದುಕೊಂಡರು ಎಂದು ತಿಳಿಸಿದರು...
ನಾರಾಯಣ ಹೆಲ್ತ್ ಕೇರ್ ಈ ದಿನ ಉಚಿತ ತಪಾಸಣೆ ಶಿಬಿರವನ್ನು ಯಶಸ್ವಿಗೊಳಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಕನಕರಾಜ್ ಮತ್ತು ಕರವಯ್ಯ ಹಿರೇಮಠ್ ಅಭಿನಂದನೆಗಳು ಸಲ್ಲಿಸಿದರು..
ಈ ಸಂದರ್ಭದಲ್ಲಿ ನಾರಾಯಣ ಹೆಲ್ತ್ ಕೇರ್ ನ ವೈದ್ಯರಾದ ಕಿರಣ್ ತೇಜು, ಕ್ರಿಸ್ತೋ, ಬಿಟ್ಟು, ನವೀನ್, ಅಭಿಷೇಕ್ ಗಡಾದ್, ಸೇರಿದಂತೆ ಕೆ.ಎಸ್ ಕ್ಲಿನಿಕ್ ನ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಪಾಲ್ಗೊಂಡಿದ್ದರು.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ