ಬಳ್ಳಾರಿ ಜಿಲ್ಲಾ ಕಂಪ್ಲಿ ತಾಲೂಕಿನ ನಂ 10 ಮುದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬೆಳಗೋಡು ಹಾಳ್ ಗ್ರಾಮದ ಆಶೂರ್ ಖಾನ್ (ಸುನ್ನಿ) ಸಂಸ್ಥೆಯ ಈ-ಸ್ವತ್ತು ನಮೂನೆ 9/11ನೀಡಲು ಹಾಗೂ ವಕ್ಫ್ ಆಸ್ತಿ ಎಂದು ಘೋಷಿಸಾದಿರಲು ತಕರಾರು ಅರ್ಜಿ
ನಂ 10 ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ನಂ 05 ಬೆಳಗೊಡು ಹಾಳ್ ಗ್ರಾಮದಲ್ಲಿ ಸದ್ರಿ ನಂ 5 ಬೆಳಗೊಡು ಹಾಳ್ ಗ್ರಾಮದಲ್ಲಿ ಇರುವ ಎಲ್ಲಾ ಜಾತಿಯ ಧರ್ಮದವರು ಸೇರಿ ಮೊಹರಂ ಆಚರಣೆ ಗೊಳಿಸಲು ಇರುವಂತಹ ಸಾರ್ವಜನಿಕ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಆಚರಣೆಗೊಳಿಸುವ ಸಾರ್ವಜನಿಕರ ಸ್ಥಳ ಮತ್ತು ಪೇಟಾರಿ ಕೂಡಿಸುವ ದೇವರ ಮನೆಗೆ ಮುಸಲ್ಮಾನ ಭಾಂದವರು ನಮೂನೆ 9-11A ನೀಡಲು ತಮ್ಮ ಕಾರ್ಯಾಲಯಕ್ಕೆ(ಪಂಚಾಯತಿಗೆ) ಅರ್ಜಿ ಸಲ್ಲಿಸಿರುವುದಾಗಿ ಗ್ರಾಮಸ್ಥರ ಗಮನಕ್ಕೆ ಬಂದಿರುತ್ತದೆ,ನಂ 5 ಬೆಳಗೊಡು ಹಾಳ್ ಗ್ರಾಮದಲ್ಲಿರುವ ದೇವರ ಕೂಡಿಸುವ ಸ್ಥಳ ಹಾಗೂ ಪೆಟಾರಿ ಇಡುವ ಮನೆಯು ಗ್ರಾಮದ ಎಲ್ಲಾ ಸಾರ್ವಜನಿಕರಿಗೆ ಸಂಬಂಧಪಟ್ಟದಾಗಿರುತ್ತದೆ,ಆದರೆ ಕೆಲ ಮುಸಲ್ಮಾನ ಭಾಂದವರು ಹಿಂದೂಗಳ ಭಾವನೆಗೆ ದಕ್ಕೆ ತರಲು ಹಾಗೂ ಗ್ರಾಮದಲ್ಲಿ ಶಾಂತಿ ಕದಡಲು ವಯಕ್ತಿಕವಾಗಿ ತಮ್ಮ ಸಮಾಜಕ್ಕೆ (ವಕ್ಫ್) ಸೇರ್ಪಡಿಸಲು ಹುನ್ನಾರ ನಡೆಸಿದ್ದು ಅದಕ್ಕಾಗಿ ನಮೂನೆ 9-11A ನೀಡಲು ಕೊರಿದ್ದು ವಿಷಾದಕರವಾಗಿರುತ್ತದೆ, ಇದರಿಂದ ಮುಂದಿನ ದಿನಮಾನಗಳಲ್ಲಿ ಗ್ರಾಮದಲ್ಲಿ ಕೋಮುಗಲಭೆಗಳು ನಡೆಯುವ ಸಂಭವಾವಿರುತ್ತದೆ,ಈ ಕೂಡಲೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಲು ತಾವುಗಳು ನಮೂನೆ 9-11A ನೀಡಬಾರದೆಂದು ತಮ್ಮಲ್ಲಿ ಈ ಮೂಲಕ ತಕರಾರು ಅರ್ಜಿಯನ್ನು ಸಲ್ಲಿಸುತ್ತಿದ್ದೇವೆ, ಒಂದು ವೇಳೆ ನಮೂನೆ 9-11A ನೀಡಿದ್ದೆ ಆದಲ್ಲಿ ಮುಂದೆ ಆಗುವ ತೊಂದರೆಗಳು ಹಾಗೂ ಅನಾಹುತಗಳಿಗೆ ಆಡಳಿತ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ,ಎಂದು ಮನವಿ ಮೂಲಕ ಎಚ್ಚರಿಸಿದ್ರು, ಈ ಕೂಡಲೇ ಅದಕ್ಕೆ ಶಾಶ್ವತ ತಡೆ ನೀಡಿ ಧರ್ಮ ಧರ್ಮಗಳ ನಡುವೆ ಬೆಳೆಯುವ ವೈಶಾಮ್ಯವನ್ನು ತಡೆಯಬೇಕಾಗಿ ವಿನಂತಿಸಿಕೊಂಡರು.
ಈ ಸ್ಥಳವನ್ನು ವಕ್ಫ್ ಬೋರ್ಡ್ ಗೆ ಸೇರಿಸಲು ಹುನ್ನಾರ ನಡೆಸುತ್ತಿದ್ದಾರೆ ಇದಕ್ಕೆ ಅನುಮತಿ ನೀಡಬಾರದು,ಮೊದಲಿಗೆ ದ್ವನಿವರ್ಧಕ (ಮೈಕ್) ಆಜಾನ್ ಬಳಸುತಿದ್ದಿಲ್ಲ ಮುಂದಿನ ದಿನಗಳಲ್ಲಿ ಧಾರ್ಮಿಕ ಭಾವನೆಗೆ ದಕ್ಕೆ ಬರುತ್ತದೆ ಹೊಸದಾಗಿ ಅನುಮತಿ ನೀಡಬಾರದು ಎಂದು ಕಂಪ್ಲಿ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಮಾಡಿದ್ರು.