Kampli : ರಾಮಸಾಗರ ಸರ್ಕಾರಿ ಪ್ರೌಢಶಾಲೆಯಲ್ಲಿ "ಗಾಂಧಿ ಓದು ಅಭಿಯಾನ " ಕಾರ್ಯಕ್ರಮ


ಸರ್ಕಾರಿ ಪ್ರೌಢಶಾಲೆ ರಾಮಸಾಗರದಲ್ಲಿ ಇಂದು "ಗಾಂಧಿ ಓದು ಅಭಿಯಾನ-2024" ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಕನ್ನಡ ವಿಶ್ವವಿದ್ಯಾಲಯ ಹಂಪಿಯ "ಹಳೆ ವಿದ್ಯಾರ್ಥಿಗಳ ಸಂಪರ್ಕ ಘಟಕ" ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ ಕ.ವಿ.ವಿ.ಹಂಪಿ, ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಎಚ್. ಡಿ. ಪ್ರಶಾಂತ್ ಹಿರಿಯ ಪ್ರಾಧ್ಯಾಪಕರು ಅಭಿವೃದ್ಧಿ ಅಧ್ಯಯನ ವಿಭಾಗ ಕ.ವಿ.ವಿ. ಹಂಪಿ ಸಂಚಾಲಕರು ಹಳೆ ವಿದ್ಯಾರ್ಥಿಗಳ ಸಂಪರ್ಕ ಘಟಕ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧಿ ಓದು ಅಭಿನಯದ ಆಶಯವನ್ನು ಹಾಗೂ ಅದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. 

ಪ್ರಸ್ತುತ ದಿನಮಾನಗಳಲ್ಲಿ ಗಾಂಧೀಜಿಯವರ ತತ್ವ ಸಿದ್ಧಾಂತಗಳ ಅನುಷ್ಠಾನದಿಂದ ದೇಶದಲ್ಲಿ ಸಮಾನತೆ ಸಹೋದರತೆ ಹಾಗೂ ದೇಶದ ಅಭಿವೃದ್ಧಿ ಸಾಧಿಸುವ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದ ಪ್ರಧಾನ ಭಾಷಣಕಾರರಾಗಿ ಉಪನ್ಯಾಸವನ್ನು ನೀಡಿದ ಡಾ. ಮಹೇಶ್ ಕ್ಯಾದಿಗಿ ಸಹಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಕಂಪ್ಲಿ ಇವರು ಮಾತನಾಡಿ, ಸಾಮಾನ್ಯ ವ್ಯಕ್ತಿಯಾಗಿದ್ದ ಗಾಂಧಿಯವರು ಮಹಾತ್ಮರಾದ ಕಥನವನ್ನು ವಿದ್ಯಾರ್ಥಿಗಳಿಗೆ ಅರ್ಥವತ್ತಾಗಿ ತಿಳಿಸಿದರು. ಸತ್ಯಾಗ್ರಹ, ಅಹಿಂಸೆ, ಸ್ವದೇಶಿಪ್ರೇಮ ಈ ಎಲ್ಲಾ ಅಂಶಗಳ ಕುರಿತು ತಮ್ಮ ಭಾಷಣದಲ್ಲಿ ಗಾಂಧೀಜಿಯವರ ಜೀವನದ ಘಟನೆಗಳ ಉದಾಹರಣೆಗಳ ಮೂಲಕ ಅರ್ಥ ಮಾಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಮುಖ್ಯಗುರುಗಳಾಗಿದ್ದ ರಮೇಶ.ಸಿ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕರಾದ ಚಿದಾನಂದಪ್ಪ ಗವಾಯಿಯವರು ಗಾಂಧೀ ಸ್ಮೃತಿಯನ್ನು ಮಕ್ಕಳಿಂದ ಹಾಡಿಸಿದರು. ಶಿಕ್ಷಕರಾದ ಶ್ರೀಕಾಂತ್ ಕೋಟ್ಯಾನ್, ಹಾಗೂ ಜ್ಞಾನೇಶ್ ಮತ್ತು ಶಿಕ್ಷಕಿಯರಾದ  ವಿದ್ಯಾಶ್ರೀ, ಸುಧಾ, ಲಕ್ಷ್ಮಿ,  ಉಪಸ್ಥಿತರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">