Kampli : ಗಾಂಧೀಜಿ, ಶಾಸ್ತ್ರಿಜೀಯವರ ಆದರ್ಶ ಪಾಲಿಸಿ, ಹೆಚ್ ಮರಿಯಪ್ಪ


ಗಾಂಧೀಜಿ, ಶಾಸ್ತ್ರಿಜೀಯವರ ಆದರ್ಶ ಪಾಲಿಸಿ, ಹೆಚ್ ಮರಿಯಪ್ಪ

ಕಂಪ್ಲಿ ಪಟ್ಟಣದ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಜೀಯವರ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು.

ಇದೇ ವೇಳೆ ಮುಖ್ಯ ಶಿಕ್ಷಕ ಹೆಚ್ ಮರಿಯಪ್ಪ ಮಾತನಾಡಿ ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿಯವರ ಜೀವನ, ಭೋಧನೆ, ತತ್ವಾದರ್ಶಗಳು ಭಾರತೀಯರ ಹೃದಯದಲ್ಲಿ  ಎಂದಿಗೂ ಅಜರಾಮರವಾಗಿದ್ದು ಮಹಾತ್ಮ ಗಾಂಧೀಜಿ ಅವರ ಜೀವನದಲ್ಲಿ ಶ್ರವಣ ಕುಮಾರನ ಪಿತೃಭಕ್ತಿ ಹಾಗೂ ಸತ್ಯ ಹರಿಶ್ಚಂದ್ರನ ನಾಟಕ ಅವರ ಮನಸ್ಸಿನಲ್ಲಿ ಅಪಾರವಾದ  ಬದಲಾವಣೆ ತರುವುದರಲ್ಲಿ ಸತ್ಯವಾದ  ವಿಚಾರವಾಗಿದೆ. "ಮಾಡು ಇಲ್ಲವೇ ಮಡಿ" ಎನ್ನುವ ಗಾಂಧೀಜಿ ಅವರ ವಾಣಿ ಈ ಜಗತ್ತಿನಲ್ಲಿ ಮಾದರಿಯ ನುಡಿಯಾಗಿದೆ ಎಂದರು. 

ನಂತರ ಮುಖ್ಯ ಶಿಕ್ಷಕಿ ಎಂ. ಪುಪ್ಪಾ ಮಾತನಾಡಿ ಲಾಲ್ ಬಹದ್ದೂರ್ ಶಾಸ್ತ್ರಿಯವರು 'ಜೈ ಜವಾನ್ ಜೈ ಕಿಸಾನ್ ' ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ, ದೇಶ ಕಂಡ ಅಪರೂಪದ ಪ್ರಧಾನಿಯಾಗಿ ಸೇವೆ ಸಲ್ಲಿಸಿ ನಮ್ಮ ದೇಶಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಕೆ.ರಾಮು ಸೇರಿದಂತೆ ಎಲ್ಲಾ ಸಹ ಶಿಕ್ಷಕರು ಶಾಲಾ ಮಕ್ಕಳು ಉಪಸ್ಥಿತರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">