ಕಂಪ್ಲಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ ರವರ ಸಾರಥ್ಯದಲ್ಲಿ ಹಾಗೂ ಬಳ್ಳಾರಿ ಜಿಲ್ಲಾಧ್ಯಕ್ಷ ಗಿರೀಶ್ ಯಾದವ್, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಬೋವೆರ್, ಕುರುಗೋಡು ತಾಲೂಕ ಅಧ್ಯಕ್ಷ ಭೀಮಣ್ಣ,ಸಿರುಗುಪ್ಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ರವರ ನೇತೃತ್ವದಲ್ಲಿ ಇಂದು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.
ನೂತನ ಕಂಪ್ಲಿ ತಾಲೂಕು ಅಧ್ಯಕ್ಷರಾಗಿ ಇಂದ್ರಜಿತ್ ಸಿಂಗ್, ಉಪಾಧ್ಯಕ್ಷರಾಗಿ ಸಿದ್ದಿ ಟಿವಿ ರಘುವೀರ್, ಸಿ.ಡಿ ಚನ್ನಕೇಶವ, ಪ್ರಧಾನ ಕಾರ್ಯದರ್ಶಿಯಾಗಿ ಗುರು ಪ್ರಸನ್ನ, ಗೌರವಾಧ್ಯಕ್ಷರಾಗಿ ಕಟ್ಟೆ ಮಾರೆಪ್ಪ, ಕಾರ್ಯಕಾರಿ ಸದಸ್ಯರಾಗಿ ರವಿ ಮಣ್ಣೂರ, ದುರ್ಗೇಶ್, ವಿರೂಪಾಕ್ಷಯ್ಯ ರವರನ್ನು ಅವಿರೋಧವಾಗಿ ಆಯ್ಕೆ ಮಾಡಿ, ಸಂಘಟನೆಯ ಏಳಿಗೆಗಾಗಿ ಶ್ರಮಿಸುವ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಆದೇಶ ಹೊರಡಿಸಿದರು.
ಇನ್ನು ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನ ಸದಸ್ಯರು ಭಾಗಿಯಾಗಿದ್ದರು.