ಸೌತ್ ಇಂಡಿಯನ್ ಲೆವೆಲ್ ಶಟಲ್ ಬ್ಯಾಡ್ಮಿಂಟನ್ ಗೆ ಕಂಪ್ಲಿಯ ದುರ್ಗಾ ಅಖಿಲ್ ಆಯ್ಕೆ
ತಮಿಳುನಾಡಿನ ಚೆನ್ನೈ ನಲ್ಲಿ ಶನಿವಾರ ಜರುಗಲಿರುವ ದಕ್ಷಿಣ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಗೆ ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದಿಂದ ಕಂಪ್ಲಿ ಪಟ್ಟಣದ ದುರ್ಗಾ ಅಖಿಲ್. ಎಂ ಆಯ್ಕೆಯಾಗಿದ್ದಾರೆ. ಇನ್ನು ಬಳ್ಳಾರಿ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ನವೀನ್, ಅಮಿತ್, ಓಂ ದುಬೆ, ಬಿನಾಯಕ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಇನ್ನು ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಛಾಪು ಮೂಡಿಸಲಿ ಹಾಗೂ ಕಂಪ್ಲಿಯ ಹೆಸರನ್ನು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಕೊಂಡೊಯ್ಯಲಿ ಎಂದು ಸಿದ್ದಿ ಟಿವಿ ಆಶಿಸುತ್ತದೆ.