ಕಂಪ್ಲಿಯಲ್ಲಿ ಎರಡು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಗಳ ನಡುವೆ ರಸ್ತೆ ಅಪಘಾತ : ಯಾವುದೇ ಹಾನಿ ಆಗಿಲ್ಲ
ಕಂಪ್ಲಿ : ನಿನ್ನೆ ನಗರದ ಡಿಪ್ಲೊಮಾ ಕಾಲೇಜ್ ಬಳಿ ಇರುವ ಕಂಪ್ಲಿ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿ ಎರಡು ಸರ್ಕಾರಿ ಬಸ್ ಗಳ ನಡುವೆ ಅಪಘಾತ ನಡೆದಿದೆ.
ಸಿಂಗಲ್ ರಸ್ತೆಯ ಮೇಲೆ ಎರಡು ಬಸ್ ಗಳು ಓವರ್ ಟೇಕ್ ಮಾಡಲು ಹೋಗಿ ಅಪಘಾತದಲ್ಲಿ ಸಿಲುಕಿಕೊಳ್ಳುವ ದೃಶ್ಯವನ್ನು ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಬಸ್ ಗಳು ಒಂದಕ್ಕೊಂದು ಸ್ಪರ್ಶಿಸಿದ್ದು, ಒಂದು ಬಸ್ಸಿಗೆ ಹಿಂಬದಿ ಹಾಗೂ ಮತ್ತೊಂದು ಬಸ್ಸಿಗೆ ಮುಂಬದಿಯ ಲೈಟ್ ಗಳು ಹಾನಿಯಾಗಿವೆ.
ಇನ್ನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಜನರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ವೀಕ್ಷಕರೇ, ಈ ಘಟನೆಯನ್ನು ನೋಡಿದ ಮೇಲೆ, ನಿಧನವಾಗಿಯೇ ಕರೆದುಕೊಂಡು ಹೋದರು ಪರವಾಗಿಲ್ಲ ಆದ್ರೇ ಸೇಫ್ ಆಗಿ ಕರೆದುಕೊಂಡು ಹೋಗುತ್ತೆವೆ ಎಂಬ ಭರವಸೆಯನ್ನ ಬಸ್ ನ ಚಾಲಕರು ನೀಡಬೇಕಿದೆ.